ಮೋದಿಯವರಿಂದ ರಾಜ್ಯದ ಜನತೆಗೆ ಸಿಗಲಿರುವ ಈ ಬಂಪರ್ ಗಿಫ್ಟ್..!

ಕರ್ನಾಟಕದ ಜನತೆಗೆ ಪ್ರಧಾನಿ ಮೋದಿಯವರಿಂದ ಬಹಳ ಅಗತ್ಯದ ಉಡುಗೊರೆಯೊಂದು ಸಧ್ಯದಲ್ಲಿಯೇ ಸಿಗಲಿದೆ.. ಏನು ಅಂತೀರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಓದಿ...
ವರ್ಷಗಳಿಂದ ಬಗೆಹರಿಯದ ಕಳಸಾ ಬಂಡೂರಿ ಹೋರಾಟಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ..ಹೌದು.., ಪ್ರಧಾನಿ ಮೋದಿಯವರು ಕಳಸಾ ಬಂಡೂರಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟಗಾರ ಮುಖಂಡರನ್ನು ಮಾತುಕತೆಗೆ ಕರೆದಿದ್ದಾರೆ ಎನ್ನಲಾಗಿದೆ. ಜೂನ್ 14, 15 ರಂದು ದೆಹಲಿಯಲ್ಲಿ ಮಾತುಕತೆ ನಡೆಯಲಿದ್ದು, ರೈತ ಹೋರಾಟಗಾರರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೋರಾಟ ಸಮಿತಿ ಹಾಗೂ ನ್ಯಾ. ವೆಂಕಟಾಚಲ ರವರು ಕೂಡ ಮೋದಿಯವರ ಜೊತೆ ಮಾತುಕತೆ ನಡೆಸಲಿದ್ದಾರೆ. ಎಷ್ಟೋ ರೈತರು ಕಳಸಾ ಬಂಡೂರಿ ಕಾರಣಕ್ಕೆ ವರ್ಷವಿಡೀ ಹೋರಾಟ ಮಾಡಿ ಜೈಲಿನ ಮುಖ ನೋಡಿದರು.. ಅದೆಷ್ಟೋ ಅಮಾಯಕರು ಪೋಲೀಸರ ಏಟು ತಿಂದರು. ಇದೀಗ ಮಾತುಕತೆಯಿಂದ ಎಲ್ಲವೂ ಬಗೆಹರಿದರೆ ಅದಕ್ಕಿಂತ ಸಂತೋಷದ ವಿಚಾರ ಬೇರೊಂದಿಲ್ಲವೆನ್ನಬಹುದು.
Comments