ಉನ್ನತ ಶಿಕ್ಷಣ ಖಾತೆ ಬದಲಾವಣೆಯ ಕುರಿತು ಕುಮಾರಸ್ವಾಮಿಯ ಮಾಸ್ಟರ್ ಪ್ಲಾನ್..!

ನೂತನ ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಕೂಡ ಒಂದಲ್ಲ ಒಂದು ತಗಾದೆಗಳು ಕೇಳಿ ಬರುತ್ತಿವೆ. ಖಾತೆ ಹಂಚಿಕೆ ವಿಷಯದಲ್ಲೂ ಕೂಡ ಇದು ತಪ್ಪಿಲ್ಲ. ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಗೊಂದಲಗಳು ಮನೆಮಾಡಿದ್ದವು. ಹಾಗೋ ಹೀಗೋ ಮಾಡಿ ಖಾತೆಗಳನ್ನು ಹಂಚಿಕೆ ಮಾಡಿದರೂ ಕೂಡ ಸಮಸ್ಯೆಗಳು ತಪ್ಪಿದ್ದಲ್ಲ.
ಜೆಡಿಎಸ್ ನ ಸಚಿವರಾದ ಜಿ.ಟಿ.ದೇವೇಗೌಡ ಅವರಿಗೆ ಬೇರೊಂದು ಖಾತೆ ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉನ್ನತ ಶಿಕ್ಷಣ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಎಂಜಿನಿಯರಿಂಗ್ ಶುಲ್ಕ ಹೆಚ್ಚಳ ಕುರಿತಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಸಭೆ ನಡೆಯಿತು. ಈ ಸಭೆಗೆ ಹಾಲಿ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ ಗೈರು ಹಾಜರಾಗಿದ್ದರು. ಈ ವಿಷಯವಾಗಿ ಕುರಿತು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಯಾರೊಬ್ಬರನ್ನೂಕೂಡ ಸದ್ಯ ಇಲಾಖೆಯಲ್ಲಿ ವರ್ಗಾವಣೆ ಮಾಡುವುದಿಲ್ಲ. ಸಿಎಂ ಆಗಿರುವ ತನಕ ಉನ್ನತ ಶಿಕ್ಷಣ ಖಾತೆ ನನ್ನ ಬಳಿಯೇ ಉಳಿಯಲಿದೆ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
Comments