ಪ್ರಧಾನಿ ಮೋದಿಯ ಫಿಟ್ನೆಸ್ ಚಾಲೆಂಜ್ ಗೆ ಖಡಕ್ ಉತ್ತರ ಕೊಟ್ಟ ಸಿಎಂ ಎಚ್'ಡಿಕೆ..!

ಇತ್ತಿಚಿಗೆ ಎಲ್ಲಾ ಕಡೆ ಫಿಟ್ನೆಸ್ ಹವಾ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಚಾಲೆಂಜ್ ಸ್ವೀಕರಿಸಿದ ಕುಮಾರಸ್ವಾಮಿ ಸರಿಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿದಿನದ ರಾಜಕಾರಣದ ಸಿಲುಕಿರುವ ನಾಯಕರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಒಂದು ಸವಾಲೆ ಸರಿ. ಇದರ ನಡುವೆ ಮೋದಿ ತಾವು ಬೆಳಗ್ಗೆ ಯೋಗ ಮತ್ತು ವಾಕಿಂಗ್ ಜತೆಗೆ ಮಾಡುವ ಒಂದಿಷ್ಟು ವ್ಯಾಯಾಮಗಳನ್ನು ಮೋದಿ ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾರೆ. ಮೋದಿ ಸವಲಾನ್ನು ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ, ನನ್ನ ಆರೋಗ್ಯದ ಕುರಿತಾಗಿ ನೀವು ಕಾಳಜಿ ವಹಿಸಿರುವುದಕ್ಕೆ ತುಂಬಾ ಧನ್ಯವಾದ. ಯೋಗ ನನ್ನ ಪ್ರತಿದಿನದ ವ್ಯಾಯಾಮದ ಒಂದು ಭಾಗವಾಗಿದೆ. ನಾನು ನನ್ನ ರಾಜ್ಯದ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಬೇಕಾಗಿದೆ. ಹಾಗಾಗಿ ಅದಕ್ಕೆ ನಿಮ್ಮ ಸಹಕಾರ ಅಗತ್ಯವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಕೇಂದ್ರದಿಂದ ರಾಜ್ಯದ ಅಭಿವೃದ್ದಿಗೆ ಸಂಬಂಧಿಸಿದಂತಹ ಎಲ್ಲಾ ಸಹಕಾರ ಸಿಗಬೇಕು ಎಂಬ ಸಂದೇಶವನ್ನು ಎಚ್ ಡಿಕೆ ಮೋದಿಯವರಿಗೆ ತಿಳಿಸಿದ್ದಾರೆ.
Comments