ಎರಡನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ ಜಯನಗರ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ
ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿಜಯ ಕುಮಾರ್ ಮೃತಪಟ್ಟ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಿಕೆಯಾಗಿತ್ತು, ಇದೇ ಜೂನ್ 11ರಂದು ಚುನಾವಣೆಯು ನಡೆದಿತ್ತು. ಇಂದು ಚುನಾವಣೆಯ ಫಲಿತಾಂಶವು ಪ್ರಕಟವಾಗುತ್ತಿದ್ದು, ಈ ನಡುವೆ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸೌಮ್ಯರೆಡ್ಡಿ ಎರಡನೇ ಸುತ್ತಿನಲ್ಲಿಯೂ ಕೂಡ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಇದರೊಂದಿಗೆ ಎರಡನೇ ಸುತ್ತಿನಲ್ಲೂ ಕೂಡ ಸೌಮ್ಯ ರೆಡ್ಡಿ ಅಲ್ಪ ಅಂತರದಲ್ಲಿ ತಮ್ಮ ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿಯ ಪ್ರಹ್ಲಾದ್ ಬಾಬುಗಿಂತ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸೌಮ್ಯ ರೆಡ್ಡಿ 6,719 ಮತಗಳನ್ನು ಹಾಗೂ ಬಿಜೆಪಿಯ ಪ್ರಹ್ಲಾದ್ ಬಾಬು 6,453 ಮತಗಳನ್ನು ಪಡೆದುಕೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾದ ರವಿಕೃಷ್ಣಾರೆಡ್ಡಿ 281 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‍ನ ಸೌಮ್ಯಾ ರೆಡ್ಡಿ 266 ಮತಗಳ ಅಂತರವನ್ನು ತಮ್ಮ ಸಮೀಪದ ಪ್ರತಿಸ್ಫರ್ಧಿ ಬಿಜೆಪಿಯ ಪ್ರಹ್ಲಾದ್ ಬಾಬುಗಿಂದ ಮುಂದಿದ್ದಾರೆ. ಒಟ್ಟು 14 ಸುತ್ತಿನ ಮತ ಎಣಿಕೆ ಇನ್ನೂ ಬಾಕಿ ಇದೆ.
Comments