ರಾಜಕೀಯದಲ್ಲಿ ಇವರಿಗೆ ಮೀರಿದ ಚಾಣಾಕ್ಷ ಮತ್ತೊಬ್ಬರಿಲ್ಲ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ..!
ಶಿವಸೇನೆಯಲ್ಲಿರುವ ಮುಖವಾಣಿ ಸಾಮ್ನಾದಲ್ಲಿ ಜೆಡಿಎಸ್ ವರಿಷ್ಠ, ಜ್ಯಾತ್ಯಾತೀತ ನಾಯಕ ಎಚ್ ಡಿ ದೇವೇಗೌಡ ಬಗ್ಗೆ ಒಂದೊಳ್ಳೆ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗಿಂತ ಜೆಡಿಎಸ್ ವರಿಷ್ಠ, ಜ್ಯಾತ್ಯಾತೀತ ನಾಯಕ ಎಚ್ ಡಿ ದೇವೇಗೌಡ ಉತ್ತಮ ಎಂದು ಶಿವಸೇನೆಯು ತಿಳಿಸಿದೆ.
ಸಾಮ್ನಾ ಪತ್ರಿಕೆಯ ಸಂಪಾದಕರಾಗಿರುವ ಶಿವಸೇನೆ ಸಂಸದರಾದ ಸಂಜಯ್ ರಾವತ್ ತಮ್ಮ ಲೇಖನದಲ್ಲಿ ಶಿವಸೇನೆಯು ಬಿಜೆಪಿಯ ಅತೀ ದೊಡ್ಡ ಎದುರಾಳಿ ಎಂದು ತಿಳಿಸಿದ್ದಾರೆ.ಅಷ್ಟೆ ಅಲ್ಲದೆ ಈ ದೇಶಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಜುಗಲ್ ಬಂದಿ ಯಾರಿಗೂ ಬೇಕಿಲ್ಲ. ಕಾಂಗ್ರೆಸ್ ಅಥವಾ ಜೆಡಿಎಸ್ ನ ಜ್ಯಾತ್ಯಾತೀತ ನಾಯಕ ದೇವೇಗೌಡರನ್ನು ಸ್ವೀಕರಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ಗಿಂತ 'ಜ್ಯಾತ್ಯಾತೀತ' ಹೆಚ್ ಡಿ ದೇವೇಗೌಡ ಉತ್ತಮ ಎಂದು ಪತ್ರಿಕೆಯ ಸಂಪಾದಕರಾಗಿರುವ ಶಿವಸೇನೆ ಸಂಸದರಾದ ಸಂಜಯ್ ರಾವತ್ ತಿಳಿಸಿದ್ದಾರೆ. ಸಾಮ್ನಾ ಪತ್ರಿಕೆಯ 'ರೋಕ್-ಠೋಕ್' ಅಂಕಣದಲ್ಲಿ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವಂತಹ ಸಂಜಯ್ ರಾವತ್, ಶಿವಸೇನೆಯ ಹಿಂದುತ್ವವಾದ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ತಿಳಿಸಿದ್ದಾರೆ.
Comments