ಸಿದ್ದುಗೆ ಖಡಕ್ ಟಾಂಗ್ ಕೊಟ್ರು ಬಿಎಸ್ ಯಡಿಯೂರಪ್ಪ..!

ನೂತನ ಮೈತ್ರಿ ಸರ್ಕಾರ ರಚನೆಯಾಗುವ ಮೊದಲೇ ಬಹುಮತ ಪಡೆದ ಬಿಜೆಪಿ ಮತ್ತೊಮ್ಮೆ ಸಾಬೀತು ಪಡಿಸುವಲ್ಲಿ ವಿಫಲವಾಯಿತು. ಹಾಗಾಗಿ ಮೈತ್ರಿ ಸರ್ಕಾರ ರಚನೆಯಾಯಿತು. ಶಾಸಕರ ಖರೀದಿಗೆ 150 ಕೋಟಿ ರು ಆಫರ್ ನೀಡಲು ಯಡಿಯೂರಪ್ಪ ಮುಂದಾಗಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರು ಪತ್ರಿಕ ಪ್ರಕಟಣೆ ಹೊರಡಿಸಿ, ಸಿದ್ದರಾಮಯ್ಯ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯನವರೇ ನೀವು ಮತ್ತು ನಿಮ್ಮ ಪಕ್ಷ ಹೀನಾಯ ಸೋಲು ಅನುಭವಿಸಿದರು ನಿಮ್ಮ ದುರಹಾಂಕರ ಅಡಗಿಲ್ಲವಲ್ಲ ಏಕೆ? ಸಿದ್ಧರಾಮಯ್ಯನವರೇ ಚಾಮುಂಡೇಶ್ವರಿ ಜನತೆ ನಿಮಗೆ ಮತ್ತು ನಿಮ್ಮ ದುರಾಹಂಕಾರಕ್ಕೆ ತಕ್ಕ ಪಾಠವನ್ನೆ ಕಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೆಂಡಕಾರಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದರೂ ಕೂಡ ಇನ್ನೂ ಸಿದ್ದರಾಮಯ್ಯನವರ ದುರಹಂಕಾರ ಮಾತ್ರ ಇನ್ನೂ ಕಡಿಮೆ ಆಗಿಲ್ಲ ಎಂದು ಯಡಿಯೂರಪ್ಪನವರು ಸರಿಯಾಗಿಯೇ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.
Comments