Flash News : ಕಾಂಗ್ರೆಸ್ ತೊರೆದ 2000 ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ!!

11 Jun 2018 10:56 AM | Politics
483 Report

ಕಾಂಗ್ರೆಸ್ ಹಾಗೂ ಬಿಜು ಜನತಾ ದಳ ತೊರೆದು 2000 ಮಂದಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಒಡಿಶಾದ ಬರಂಬಾ ಬ್ಲಾಕ್ ಪ್ರದೇಶದಲ್ಲಿ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ.

ಅಲ್ಲದೇ ಮಾಜಿ ಐಎಎಸ್ ಅಧಿಕಾರಿ ಅಶೀಕ್ ಕುಮಾರ್ ತ್ರಿಪಾಟಿ ಅವರೂ ಕೂಡ ಬಿಜೆಪಿಯಿಂದ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದ ವೇಳೆಯೇ ಪಕ್ಷವನ್ನು ಸೇರಿದರು. ಇದೆ ವೇಳೆ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಲ್ಲರನ್ನೂ ಕೂಡ ಆತ್ಮೀಯವಾಗಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

Edited By

Shruthi G

Reported By

Shruthi G

Comments