‘ಕೈ’ ಸಚಿವರಿಗೆ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟ್ರು ಮಾಜಿ ಸಿಎಂ ಸಿದ್ದರಾಮಯ್ಯ!!

ಸಚಿವ ಸ್ಥಾನದಿಂದ ವಂಚಿತರಾಗಿ ಕಾಂಗ್ರೆಸ್ ನಲ್ಲಿ ಬಂಡಾಯವೆದ್ದಿರುವ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬುದ್ದಿ ಹೇಳಿದ್ದು, ಮುಂಬರುವ ದಿವಸದಲ್ಲಿ ಒಳ್ಳೆಯ ಕಾಲ ಬರುತ್ತದೆ ಕಾಯುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಸಚಿವರ ಆಯ್ಕೆಯಾದ ನಂತರ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದಿದ್ದೆ. ಈ ನಡುವೆ ಸಿಎಲ್ ಪಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗೂ ನನಗೂ ಸಂಬಂಧವಿಲ್ಲ ಎನ್ನುವಂತೆ ಬಾದಾಮಿಯಲ್ಲಿ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞನತೆ ಸಲ್ಲಿಸಿದರು. ಬಾದಾಮಿಯ ನೀಲಗುಂದದಲ್ಲಿ ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿದ ಅವರು ನಾನು ಎಲ್ಲಾ ಅಸಮಾಧಾನ ಶಾಸಕರ ಜೊತೆ ಮಾತನಾಡಿರುವೆ. ಆದರೆ ಯಾವುದೇ ರೀತಿಯಲ್ಲಿ ಭರವಸೆ ನೀಡಿಲ್ಲ ,ಭಿನ್ನಮತ ಶಾಸಕರನ್ನು ಸಮಾಧಾನಪಡಿಸಿದ್ದೇನೆ. ಈಗ ಯಾವುದೇ ಅತೃಪ್ತಿ ಇಲ್ಲ. ಈಗಿನ ಮಂತ್ರಿಗಳಿಗೆ ಎರಡು ವಷ೯ ಅವಧಿ ನೀಡಿ ಮಾತನಾಡಿದ್ದೇವೆ. ಮುಂದಿನ ಅವಧಿಗೆ ಉಳಿದವರಿಗೆ ಮಂತ್ರಿ ಸ್ಥಾನ ನೀಡುವಾಗಿ ಹೇಳಿದ್ದೇವೆ ಎಂದರು.
Comments