ಡಿ.ಕೆ.ಶಿ ಹೆಗಲಿಗೆ ಮತ್ತೊಂದು ಹೊಸ ಜವಾಬ್ದಾರಿ..!
ಕಾಂಗ್ರೆಸ್ ಪಕ್ಷದಲ್ಲಿ ಮನೆಮಾಡಿರುವ ಅಸಮಾಧಾನವನ್ನು ತೆಗೆದುಹಾಕುವ ಹೊಣೆಗಾರಿಕೆಯನ್ನು ಹಿರಿಯ ಮುಖಂಡರಾದ ಆರ್.ವಿ. ದೇಶ ಪಾಂಡೆ, ಕೆ.ಜೆ. ಜಾರ್ಜ್ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿ ಕೊಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ನಡೆದ ಹಿರಿಯ ಸಚಿವರು ಹಾಗೂ ಮುಖಂಡರ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.ಅದಲ್ಲದೆ, ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಈ ಅತೃಪ್ತರ ನಾಯಕತ್ವ ವಹಿಸುತ್ತಿರುವುದರಿಂದ ಖಾಲಿ ಇರುವ ಆರು ಸ್ಥಾನಗಳನ್ನು ಅತೀ ಶೀಘ್ರವೇ ಭರ್ತಿ ಮಾಡುವಂತೆ ಹೈಕಮಾಂಡನ್ನು ಕೋರಲು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ವರದಿ ಮಾಡಿವೆ.
Comments