ಬಿಗ್ ಬ್ರೇಕಿಂಗ್ : ಸಿದ್ದು ಪರಮಾಪ್ತ ಬಿಜೆಪಿ ಗೆ .!!

08 Jun 2018 10:42 AM | Politics
40372 Report

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದ ಹಾಗೇ ಜೆಡಿಎಸ್ ಗಿಂತ ಹೆಚ್ಚು ಕಾಂಗ್ರೆಸ್ ನ ಶಾಸಕರು ತಮಗೆ ಸಚಿವ ಸ್ಥಾನ ಸಿಗಲಿಲ್ಲ ಅಂತ ಸಿಟ್ಟಾಗಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಪ್ತ, ವಿಧಾನ ಪರಿಷತ್ ಸದ್ಯಸ ಹೆಚ್.ಎಂ ರೇವಣ್ಣ ಅವರು ಕುರುಬ ಸಮುದಾಯದ ಅಭಿವೃದ್ದಿಗಾಗಿ ಬಿಜೆಪಿಗೆ ಹೋಗುವುದಕ್ಕೆ ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕುರುಬ ಸಮಾಜದ ಪ್ರಭಾವಿ ಮುಖಂಡ ಹೆಚ್.ಎಂ.ರೇವಣ್ಣ ಅವರು ಬಿಜೆಪಿಗೆ ಸೇರ್ಪಡೆಗೊಂಡರೆ ಎಲ್ಲಾ ಕುರುಬ ಸಮಾಜದ ಬೆಂಬಲ ದೊರೆಯಲಿದೆ ಎಂಬ ನಿರ್ಧಾರಕ್ಕೆ ಬಿಜೆಪಿ ರಾಜ್ಯ ನಾಯಕರು ಬಂದಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಆಹ್ವಾನ ರೇವಣ್ಣನಿಗೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ದೂರವಾಣಿ ಮೂಲಕ ಬಿಜೆಪಿ ಮುಖಂಡರಿಂದ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ರೇವಣ್ಣ ಹಾಗೂ ಈಶ್ವರಪ್ಪ ಅವರ ನೇತೃತ್ವದಲ್ಲಿ ಕುರುಬ ಸಮಾಜದ ಸಹಕಾರವನ್ನು ಪಡೆಯಬಹುದು ಎಂಬ ಲೆಕ್ಕಾಚಾರಕ್ಕೆ ಬರಲಾಗಿದೆ. ಇದೇ ವೇಳೆ ಅವರು ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ  ಆಯ್ಕೆಯಾದ ಜಯಮಾಲ ಅವರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿರುವುದಕ್ಕೆ ಸಿಟ್ಟಾಗಿದ್ದಾರೆ. ಇದಲ್ಲದೇ ವಿಧಾನಸಪರಿಷತ್ ನಲ್ಲಿ ಅಡಳಿತ ಪಕ್ಷದ ಮುಖ್ಯಸ್ಥೆಯನ್ನಾಗಿ ಕೂಡ ಜಯಮಾಲ ಅವರನ್ನು ನೇಮಕ ಮಾಡಿರುವುದರಿಂದ ಬೇಸರವಾಗಿದ್ದು, ರಾಜಕೀಯದಲ್ಲಿ ಅನುಭವ ವಿರುವ ನಾವು ಇವುಗಳನ್ನು ನೋಡಿಕೊಂಡು ಇರುವುದು ಹೇಗೆ ಹೇಳಿ ಅಂತ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Edited By

Shruthi G

Reported By

Shruthi G

Comments