ಜೆಡಿಎಸ್ ಗೆ ಬಿಗ್ ಶಾಕ್ : ಇನ್ನೊಂದು ತಿಂಗಳೊಳಗೆ ಜೆಡಿಎಸ್‌ನ ಸಚಿವರೊಬ್ಬರ ರಾಜೀನಾಮೆ..?!



ಸಚಿವ ಸಂಪುಟ ರಚನೆಯಾದ ಬೆನ್ನಲೆ ಸಾಕಷ್ಟು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರು ರಾಜೀನಾಮೆ ನೀಡಲಿದ್ದಾರೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಆ ಸಚಿವ ಸ್ಥಾನವನ್ನು ನನಗೆ ನೀಡುವ ಭರವಸೆ ಇದೆ ಅಂತರಾದ ಜೆಡಿಎಸ್ ಶಾಸಕ ಸತ್ಯನಾರಾಯಣ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರ ಜೊತೆ ಮಾತನಾಡುತ್ತ ಈ ವಿಷಯವನ್ನು ಹೇಳಿದರು. ಇದೇ ವೇಳೆ ಅವರು ನನಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ನನಗೆ ಪಕ್ಷದ ಮುಖಂಡ ಮಾಜಿ ಪ್ರಧಾನಿ ದೇವೇಗೌಡರು ಉಪಸಭಾಪತಿ ಸ್ಥಾನದ ಭರವಸೆ ಕೊಟ್ಟಿದ್ದರು. ಆದರೆ ಅದನ್ನು ಒಪ್ಪಿಕೊಳ್ಳದಂತೆ ನಮ್ಮ ಸಮಾಜದವರು ಹೇಳಿದ್ದಾರೆ. ಹೀಗಾಗಿ ಉಪಸಭಾಪತಿ ಸ್ಥಾನ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಅದೇ ವೇಳೆ ಬಿ.ಸತ್ಯನಾರಾಯಣ್ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಒಂದು ತಿಂಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
Comments