ಈ ಐವರಲ್ಲಿ ಒಬ್ಬರಲ್ಲಿ ಒಲಿಯಲಿದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ..!?
ಕಳೆದ ಒಂದಿಷ್ಟು ದಿನಗಳಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಳುಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಂಗ್ರೆಸ್ ನಾಯಕರ ಚಿತ್ತ ಇದೀಗ ಕೆಪಿಸಿಸಿ ಅಧ್ಯಕ್ಷ ಆಯ್ಕೆಯತ್ತ ಅನ್ನುವ ತರ ಆಗಿದೆ. ಮಂಗಳವಾರ ನಡೆದ ಸಚಿವ ಸಂಪುಟದ ಬಗೆಗಿನ ಚರ್ಚೆಯ ಜೊತೆಜೊತೆಗೆ ಕೆಪಿಸಿಸಿ ಅಧ್ಯಕ್ಷ ಆಯ್ಕೆಯ ಚರ್ಚೆಯು ನಡೆದಿದೆ. ಇದರ ಜೊತೆಗೆ ರಾಜ್ಯದ ನಾಲ್ಕು ಪ್ರಮುಖ ಸಮುದಾಯಗಳಿಂದ ನಾಲ್ಕು ಪ್ರಮುಖ ಮುಖಂಡರ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ.
ವೀರಶೈವ ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ, ಒಕ್ಕಲಿಗ ಸಮುದಾಯದ ಎಂ.ಕೃಷ್ಣಪ್ಪ,ದಲಿತ ಸಮುದಾಯದ ಕೆ. ಎಚ್.ಮುನಿಯಪ್ಪ, ಹಿಂದುಳಿದ ವರ್ಗದ ಬಿ ಕೆ ಹರಿಪ್ರಸಾದ್ ಈ ನಾಲ್ವರಲ್ಲಿ ಒಬ್ಬರು ಕೆಪಿಸಿಸಿ ಅಧ್ಯಕ್ಷ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೈಕಮಾಂಡ್ ಮೂಲ ಗಳು ನೀಡುತ್ತಿರುವ ಮಾಹಿತಿ. ಆದರೆ ನಾಲ್ವರನ್ನೂ ಬಿಟ್ಟು ಐದನೆಯವರಾದ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
Comments