ಮೈತ್ರಿ ಸರ್ಕಾರಕ್ಕೆ ಬಿಗ್ ಶಾಕ್ : ಮತ್ತೊಂದು ಪ್ರಭಾವಿ ವಿಕೆಟ್ ಪತನ..!



ವಿಧಾನಸಭಾ ಚುನಾವಣೆ ಮುಗಿದು ತುಂಬಾ ದಿನಗಳೆ ಕಳೆದಿವೆ. ಆದರೂ ಸಚಿವ ಸಂಪುಟವು ಇನ್ನೂ ಸರಿಯಾಗಿ ವಿಸ್ತರಣೆ ಇರುವುದು ರಾಜಕೀಯವಲಯದಲ್ಲೆ ಬೇಸರ ತಂದಿದೆ.
ಇದೇ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಎಂ.ಬಿ.ಪಾಟೀಲ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನೂತನವಾಗಿ ಆಯ್ಕೆಯಾದ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ಕಾಲಾವಕಾಶವನ್ನು ಕೋರಿದ್ದು, ಖುದ್ದಾಗಿ ಅಥವಾ ಬೆಂಬಲಿಗರ ಮುಖಾಂತರವಾಗಿ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.ಪ್ರಮಾಣವಚನದ ಸ್ವೀಕಾರ ಸಮಾರಂಭಕ್ಕೂ ಮುನ್ನವೇ ಅಂದರೆ ಮಧ್ಯಾಹ್ನ 1.15 ರ ಹೊತ್ತಿಗೆ ಸ್ಪೀಕರ್ ಅವರನ್ನು ಭೇಟಿ ಮಾಡುವುದಾಗಿ ಆಪ್ತರ ಬಳಿ ಎಂ ಬಿ ಪಾಟೀಲ್ ಹೇಳಿಕೊಂಡಿದ್ದಾರೆ.
Comments