ಸಂಪುಟ ಸೇರಲಿರುವ ಕಾಂಗ್ರೆಸ್ ಶಾಸಕರು..! ಯಾರಿಗೆ ಯಾವ ಸ್ಥಾನ..?
ಬಹಳ ದಿನಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಂಪುಟಕ್ಕೆ ಸೇರ್ಪಡೆಯಾಗಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ ಇಂದು ಅಧಿಕೃತವಾಗಿ ಹೊರಬೀಳುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ಮೈತ್ರಿ ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನಗಳನ್ನು ನೀಡಬೇಕು ಎಂಬುದನ್ನು ಕಾಂಗ್ರೆಸ್ ವರಿಷ್ಠರು ಈಗಾಗಲೇ ನಿರ್ಧಾರ ಮಾಡಿ ಅಂತಿಮಗೊಳಿಸಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಹಾಗೂ ನಾಯಕರು ಒಪ್ಪಿಕೊಂಡಿದ್ದು ಇಂದು ಅಧಿಕೃತವಾಗಿ ಪ್ರಕಟಣೆಯನ್ನು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಶಾಸಕರ ಬದಲು ಹೊಸ ಮುಖಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ಈ ಹಿಂದೆಯೇ ತೀರ್ಮಾನಿಸಿತ್ತು. ಆದರೆ, ಈ ಕುರಿತು ಹಿರಿಯ ನಾಯಕರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅನುಭವ ಮತ್ತು ಹಿರಿತನದ ಆಧಾರದ ಮೇಲೆ ಅವರಿಗೆ ಅವಕಾಶ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ಇದೀಗ 15 ಶಾಸಕರ ಪಟ್ಟಿಯನ್ನು ಅಧ್ಯಕ್ಷ ರಾಹುಲ್ ಗಾಂಧಿ ಸಿದ್ಧಪಡಿಸಿದ್ದಾರೆ.
ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ ಈ ಕೆಳಕಂಡಂತಿದೆ.
ಡಿ.ಕೆ.ಶಿವಕುಮಾರ್
ಹೆಚ್.ಕೆ.ಪಾಟೀಲ್
ಆರ್ .ವಿ.ದೇಶಪಾಂಡೆ
ಶಾಮನೂರು ಶಿವಶಂಕರಪ್ಪ
ಕೆ.ಜೆ. ಜಾರ್ಜ್
ಯು.ಟಿ.ಖಾದರ್
ಕೃಷ್ಣಬೈರೇಗೌಡ
ಶಿವಾನಂದ ಪಾಟೀಲ್
ಜಮೀರ್ ಅಹ್ಮದ್
ಶಿವಶಂಕರ್ ರೆಡ್ಡಿ
ಶಂಕರ್
ಜಯಮಾಲಾ
ಪ್ರಿಯಾಂಕ್ ಖರ್ಗೆ
Comments