ರಾಕಿಂಗ್ ಸ್ಟಾರ್ ಯಶ್ ರನ್ನು ಭೇಟಿ ಮಾಡಿದ ಮೊಳಕಾಲ್ಮೂರು ಶಾಸಕ: ಕಾರಣ ಏನ್ ಗೊತ್ತಾ?

ಮೊಳಕಾಲ್ಮೂರು ಶಾಸಕರಾದ ಶ್ರೀರಾಮುಲು ಅವರು ರಾಕಿಂಗ್ ಸ್ಟಾರ್ ಯಶ್ ಅವರುನ್ನು ಭೇಟಿ ಮಾಡಿ, ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾತುಕತೆ ನಡೆಸಿದ್ದಾರೆ. ಮೋದಿ ಸರ್ಕಾರದ ಸಾಧನೆ ಬಗ್ಗೆಯೂ ಕೂಡ ವಿವರಿಸಿದ್ದಾರೆ. ಅಲ್ಲದೇ ಮೋದಿ ಸಾಧನೆ ಕುರಿತಾದ ಕಿರುಹೊತ್ತಿಗೆಯನ್ನು ಕೂಡ ಶ್ರೀರಾಮುಲು ಅವರು ಯಶ್ ಗೆ ನೀಡಿದ್ದಾರೆ. ಬ್ಲ್ಯಾಕ್ ಮನಿ ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮನವರಿಕೆಯನ್ನು ಮಾಡಿದ್ದಾರೆ. ಗಂಗಾನದಿ ಶುದ್ಧೀಕರಣ ಕುರಿತು ಮೋದಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಂಕಿ ಅಂಶಗಳ ಸಮೇತ ವಿವರಣೆ ಮಾಡಿದ್ದಾರೆ.
Comments