ನಾಳೆ ಪೂರ್ಣ ಪ್ರಮಾಣದ ಸಂಪುಟ ಜಾರಿಯಾಗಲ್ಲ: ಸಿಎಂ ಕುಮಾರಸ್ವಾಮಿ

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ನಡೆಯಲಿದೆ. ಆದರೆ ರಾಜಕೀಯದ ಕೆಲವು ಕಾರಣಗಳಿಗೆ ನಾಳೆ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಖಾತೆ ಹಂಚಿಕೆ ವಿಷಯದಲ್ಲಿ ಕಾಂಗ್ರೆಸಿಗೆ 22 ಮತ್ತು ಜೆಡಿಎಸ್ ಗೆ 12 ಸ್ಥಾನಗಳು ಎಂದು ನಿರ್ಧಾರ ಮಾಡಿದ್ದಾಗಿದೆ. ಜೆಡಿಎಸ್ ನ 12 ಸ್ಥಾನಗಳಲ್ಲಿ ಒಂದು ಬಿಎಸ್ಪಿ ಶಾಸಕ ಎನ್. ಮಹೇಶ್ ಅವರಿಗೆ ನೀಡಬೇಕಾಗಿದ್ದು ಒಟ್ಟು 11 ಸಚಿವ ಸ್ಥಾನಗಳು ಜೆಡಿಎಸ್ ಗೆ ತೆಕ್ಕೆಗೆ ಬೀಳಲಿವೆ. ಇದರಲ್ಲಿ 8 ಸ್ಥಾನಗಳನ್ನಷ್ಟೇ ಭರ್ತಿ ಮಾಡಲು ನಿರ್ಧರಿಸಿದ್ದೇವೆ. ಕೆಲವು ರಾಜಕೀಯ ಕಾರಣಗಳಿಗಾಗಿ ಕೆಲವು ಸ್ಥಾನಗಳನ್ನು ತುಂಬದೇ ಬಾಕಿ ಉಳಿಸಿಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
Comments