ಇಂಧನದ ಬದಲು ಜಲ ಸಂಪನ್ಮೂಲಕ್ಕೆ ಬೇಡಿಕೆ ಇಡ್ತಾ ಜೆಡಿಎಸ್..!

ರಾಜಕೀಯದಲ್ಲಿ ವಲಯದ ಮಹತ್ವದ ಬೆಳವಣಿಗೆಯೊಂದರಲ್ಲಿ ಖಾತೆ ಬದಲಾವಣೆ ಕುರಿತು ಜೆಡಿಎಸ್ ಚಿಂತನೆ ನಡೆಸಿದೆ ಎಂಬುದು ತಿಳಿದುಬಂದಿದೆ.
ಇಷ್ಟು ದಿನ ಕಾಂಗ್ರೆಸ್ ನಿಂದ ಇಂಧನ ಖಾತೆಯನ್ನು ಪಡೆದ ಜೆಡಿಎಸ್ ಈಗ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದಾಗಿದೆ, ಈ ಸಂಬಂಧ ಖಾತೆ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಮೊದಲೇ ಜಲಸಂಪನ್ಮೂಲ ಖಾತೆ ಕೇಳಿತ್ತು. ಆದರೆ ಅದರ ಬದಲು ಕಾಂಗ್ರೆಸ್ ಇಂಧನ ಖಾತೆ ಬಿಟ್ಟುಕೊಟ್ಟಿತ್ತು. ಆದರೆ ಇದೀಗ ಕಾಂಗ್ರೆಸ್ ನ ಪ್ರಭಾವಿ ನಾಯಕನಾದ ಡಿ.ಕೆ. ಶಿವಕುಮಾರ್ ಇಂಧನ ಖಾತೆ ಮೇಲೆ ಕಣ್ಣಿಟ್ಟಿರುವ ಕಾರಣ ಈಗ ಜೆಡಿಎಸ್ ಇಂಧನ ಖಾತೆಯನ್ನು ಕಾಂಗ್ರೆಸ್ ಗೆ ನೀಡಲು ಮುಂದಾಗಿದದೆ. ಅದರ ಬದಲು ಜಲ ಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
Comments