ಬ್ರೇಕಿಂಗ್ ನ್ಯೂಸ್ : ಮೈತ್ರಿ ಸರ್ಕಾರಕ್ಕೆ ಬಿಗ್ ಶಾಕ್ ನೀಡಲು ಮುಂದಾದ ಬಿಜೆಪಿ ಸಿಡಿಸಿದ ಹೊಸ ಬಾಂಬ್..!

ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದವರು ಬಂಡಾಯ ಎದ್ದು, ನಾಯಕತ್ವದ ವಿರುದ್ಧ ತಿರುಗಿ ಬೀಳಬಹುದು. ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು, ಇದನ್ನು ಬಿಕ್ಕಟ್ಟನ್ನು ಅನುಕೂಲಕಾರಿಯಾಗಿ ಬಳಸಿಕೊಳ್ಳುವುದು ಸದ್ಯದ ಲೆಕ್ಕಾಚಾರ’ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ಸಚಿವ ಸ್ಥಾನ ಸಿಗುತ್ತದೆ ಎಂಬ ಆಸೆಯಿಂದ 8 ರಿಂದ 12 ಶಾಸಕರು ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದಾರೆ. ಅವರೆಲ್ಲರೂ ಈಗಲೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ . ಒಂದು ವೇಳೆ ಸಚಿವ ಸ್ಥಾನ ಕೈತಪ್ಪಿದರೆ ಅವರೆಲ್ಲರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಮ್ಮ ಕೈಜೋಡಿಸಲಿದ್ದಾರೆ. ಆಗ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆರು ತಿಂಗಳು ಅವಿಶ್ವಾಸ ಮತ ಮಂಡಿಸಲು ಅವಕಾಶ ಇಲ್ಲದೇ ಇರುವುದರಿಂದ, ಸರ್ಕಾರ ಮುಂದುವರಿಯಲು ಅಡ್ಡಿಯಿಲ್ಲ. ಆದರೆ, ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ರಾಜೀನಾಮೆ ನೀಡದಿರುವುದನ್ನು ಮುಂದಿಟ್ಟುಕೊಂಡು, ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ, ಸರ್ಕಾರ ವಿಸರ್ಜಿಸಬೇಕು ಎಂದು ಆಗ್ರಹಿಸಿ ಜನಾಂದೋಲನ ನಡೆಸುವ ಆಲೋಚನೆ ಪಕ್ಷದ ನಾಯಕರದ್ದಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
Comments