‘ನನಗೆ ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ತಿಕೊಂಡು ಕಾಲ ಕಳೀತೀನಿ' ಅಂತ ಡಿಕೆಶಿ ಹೇಳಿದ್ದೇಕೆ?

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕಾರಣಕರ್ತವಾಗಿದ್ದ ಇದೀಗ ತಮ್ಮ ಪಕ್ಷದ ಬಗ್ಗೆಯೆ ತೀವ್ರ ಅಸಮಾಧಾನವನ್ನು ಡಿಕೆ ಶಿವಕುಮಾರ್ ಅವರೇ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಲೆಕ್ಕಾಚಾರಗಳಿಂದ ಅಸಮಾಧಾನಗೊಂಡಿರುವ ಡಿಕೆಶಿ ಪಕ್ಷದ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಂಪುಟ ವಿಸ್ತರಣೆ ಮಾಡಿದಾಗ ನನಗೆ ಮುಜುರಾಯಿ ಖಾತೆ ಕೊಡಿ. ದೇವಸ್ಥಾನ ಸುತ್ತಿಕೊಂಡು ಕಾಲ ಕಳೆಯುತ್ತೇನೆ ಎಂದು ವರಿಷ್ಟರೆದುರು. ಡಿಕೆ ಶಿವಕುಮಾರ್ ಅವರು ಹೇಳಿರುವ ಮಾತು ಇದೀಗ ಬೆಳಕಿಗೆ ಬಂದಿದೆ. ಬಲ್ಲ ಮೂಲಗಳು ಈ ವಿಷಯವನ್ನು ಸ್ಪಷ್ಟ ಪಡಿಸಿದೆ. ಮೈತ್ರಿ ಸರ್ಕಾರದಲ್ಲಿ ನನಗೆ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಇದೀಗ ಆ ಖಾತೆಯಿಂದ ವಂಚಿತರಾಗಿದ್ದಾರೆ.. ಹಾಗಾಗಿ ಡಿಕೆಶಿ ಅವರು ಮೈತ್ರಿ ಸರ್ಕಾರದ ಮೇಲೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.
Comments