ಸಿ.ಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿರುವ ಕಮಲ್ ಹಾಸನ್-ಕಾರಣ ಏನ್ ಗೊತ್ತಾ?
ತಮಿಳಿನ ಖ್ಯಾತ ನಟ ಮತ್ತು ರಾಜಕಾರಣಿಯಾದ ಕಮಲ್ ಹಾಸನ್ ಅವರು ಇಂದು ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ. ಕಮಲ್ ಹಾಸನ್ ಅವರು ರಾಜಕೀಯ ರಂಗಕ್ಕೆ ಕಾಲಿಟ್ಟು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಈ ಭೇಟಿ ಮಹತ್ವವನ್ನು ಪಡೆಯಲಿದೆ.
ಇಂದು ಸುಮಾರು ಬೆಳಿಗ್ಗೆ 11.30 ಕ್ಕೆ ಕಮಲ್ ಹಾಸನ್ ಅವರು ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆಯನ್ನು ನಡೆಸಲಿದ್ದಾರೆ. ಪಕ್ಷಗಳ ನಡುವೆ ರಾಜಕೀಯ ಹೊಂದಾಣಿಕೆಯ ಜೊತೆಯಲ್ಲಿ, ಕಾವೇರಿ ವಿವಾದದ ಸಮಸ್ಯೆಯನ್ನು ಕುರಿತು ಸಹ ಕಮಲ್ ಹಾಸನ್ ಅವರು ಕುಮಾರಸ್ವಾಮಿ ಬಳಿ ಚರ್ಚೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ. ತಮಿಳುನಾಡಿನಲ್ಲಿ ಮಕ್ಕಳ ನೀಧಿ ಮಯಾಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್ ಹಾಸನ್ ಅವರು ಮತ್ತೊಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಅದನ್ನು ಬೆಳೆಸುವ ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ಅವರು ಕುಮಾರಸ್ವಾಮಿ ಅವರೊಂದಿಗಿನ ಭೇಟಿ ಸಮಯದಲ್ಲಿ ಕೆಲವು ಸಲಹೆಗಳನ್ನು ಪಡೆದುಕೊಳ್ಳಲಿದ್ದಾರೆ. ಜೊತೆಗೆ ರಾಜಕೀಯ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವಂತೆವಂತೆಯೂ ಕೂಡ ರಜನಿ ಕುಮಾರಸ್ವಾಮಿ ಅವರ ಬಳಿ ಮಾತನಾಡಲಿದ್ದಾರೆ.
Comments