ನಮ್ಮ ಕಾರ್ಯಕರ್ತರನ್ನು ಟಚ್ ಮಾಡಿದ್ರೆ ಸುಮ್ಮನೆ ಇರಲ್ಲ ಎಂದ ಬಿಜೆಪಿ ನಾಯಕ..!
ನೂತನ ಮೈತ್ರಿ ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿಲ್ಲ ಆಗಲೇ ಸಾಕಷ್ಟು ಗಲಭೆಗಳು ಗೊಂದಲಗಳು..ಇದೇ ಬೆನ್ನಲ್ಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲೂ ನಮ್ಮ ಕಾರ್ಯಕರ್ತರನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ಸುದ್ಧಿಗಾರರ ಜೊತೆ ಮಾತನಾಡುತ್ತಿದ್ದ ವೇಳೆ ಕುಮಾರಸ್ವಾಮಿ ಸರ್ಕಾರ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಪ್ರತಾಪ್ ಸಿಂಹ ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಾನು ಮಾಡಿರುವ ಕೆಲಸದ ಬಗ್ಗೆ ಹೇಳಿಕೊಂಡಿರುವ ಪ್ರತಾಪ್ ಸಿಂಹ ಮೈಸೂರಿನ ಜನ ನನ್ನಲ್ಲಿ ನಂಬಿಕೆಯಿಟ್ಟಿದ್ದಾರೆ. ನಾನು ಬೇರೆಯವರ ರೀತಿ ಯಾವ ಪಕ್ಷಕ್ಕೂ ಹೋಗುವುದಿಲ್ಲ.. ನಾನು ಮೈಸೂರು ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು.
Comments