‘ಕೈ’ ಶಾಸಕರಿಗೆ ಹೈಕಮಾಂಡ್ ಕೊಡ್ತು ಬಿಗ್ ಶಾಕ್..! ಇವರಿಗಿಲ್ಲ ಸಚಿವರ ಸ್ಥಾನ..!?
ಇನ್ನೇನು ಮೈತ್ರಿ ಸರಕಾರದಿಂದ ಸಂಪುಟ ರಚನೆ ಆಯ್ತು ಅನ್ನುವಷ್ಟರಲ್ಲಿ ಸಾಕಷ್ಟು ಗೊಂದಲಗಳು ಎಲ್ಲರಲ್ಲೂ ಮೂಡಿದವು. ಇದೀಗ ಎಲ್ಲ ಗೊಂದಲಗಳಿಗೆ ಬ್ರೇಕ್ ಬಿದ್ದಂತಾಗಿದೆ. ಅಲ್ಲದೆ ಕೈ ಶಾಸಕರಿಗೆ ಮತ್ತೊಂದು ಶಾಕ್ ಕೂಡ ಕೊಟ್ಟಿದೆ...ಅದೇನು ಏನು ಅಂತೀರಾ....ಹಾಗಾದ್ರೆ ಮುಂದೆ ಓದಿ...
ಹಿರಿಯ ಶಾಸಕರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಪಕ್ಷ ಸಂಘಟಿಸಿಲ್ಲ. ಅವರೇ ಕಷ್ಟ ಪಟ್ಟು ಗೆದ್ದು ಬರೋ ಪರಿಸ್ಥಿಯಲ್ಲಿದ್ದಾರೆ. ಯಾಕೆ ಸಚಿವ ಸ್ಥಾನ ನೀಡಬೇಕು? ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪ್ಪಟ ಬ್ರಾಹ್ಮಣರಲ್ಲದಿದ್ದರೂ, ಬ್ರಾಹ್ಮಣ ಕೋಟಾದಲ್ಲಿ ಸದ ಸಚಿವ ಸ್ಥಾನ ಪಡೆಯುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬಾರದು,' ಎಂದು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸಚಿವ ಸ್ಥಾನ ನೀಡಬಾರದೆಂದು ಆಗ್ರಹಿಸಿ ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಹಾಗೂ ಗಾಂಧಿನಗರದ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಸಚಿವ ಸ್ಥಾನ ತಪ್ಪುವ ಸೂಚನೆ ಸಿಕ್ಕಿರುವ ದೇಶಪಾಂಡೆ ಅವರು ಹೊಸ ಪಟ್ಟು ಹಿಡಿದಿದ್ದು, ದೇವೇಗೌಡ ರ ಸಂಪುಟದಲ್ಲಿ ಕೆಲಸ ಮಾಡಿದವನು ನಾನು. ರಾಮಕೃಷ್ಣ ಹೆಗಡೆ ಜೊತೆ ಕೆಲಸ ಮಾಡಿದ್ದೇನೆ. ಈಗ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಲಾರೆ. ಅವರಿಗೆ ಸಹಪಾಠಿ ಆಗಲಾರೆ,' ಎಂದು ಹೇಳುತ್ತಿದ್ದು, 'ನನಗೆ ಪಕ್ಷದ ಜವಾಬ್ದಾರಿ ಕೊಡಿ. ಸಮರ್ಥವಾಗಿ ನಿಭಾಯಿಸುವೆ,' ಎಂದು ದುಂಬಾಲು ಬಿದ್ದಿದ್ದಾರೆ ಎನ್ನಲಾಗುತ್ತಿದೆ. ದೇಶಪಾಂಡೆ ಅವರ ಈ ಬೇಡಿಕೆಯಿಂದ ರಾಹುಲ್ ಗಾಂಧಿಯ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಈಗಾಗಲೇ ಈ ಪದವಿಗಾಗಿ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಅವರು ರೇಸ್‌ನಲ್ಲಿದ್ದಾರೆ. ಮುಂದಿನ ವಾರದಲ್ಲಿ ಈ ಸ್ಥಾನಕ್ಕೆ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Comments