ಇಂಧನ ಖಾತೆ ಹಂಚಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ..!

ಖಾತೆ ಹಂಚಿಕೆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಯಾರಿಗೆ ಯಾವ ಖಾತೆ ಕೊಡಬೇಕು ಎಂಬುದು ಗೊಂದಲದ ಗೀಡಾಗಿತತ್ತು. ಅದರಲ್ಲೂ ಇಂಧನ ಖಾತೆಯ ಮೇಲೆ ಸಾಕಷ್ಟು ಜನರಿಗೆ ಕಣ್ಣು ಬಿದ್ದಿತ್ತು.ಇಂಧನ ಖಾತೆಯ ಸಂಬಂಧ ಡಿಕೆಶಿ ಮತ್ತು ರೇವಣ್ಣ ಇಬ್ಬರಿಗೂ ಕೂಡ ಆಸಕ್ತಿ ಇದ್ದಿದ್ದು ನಿಜ. ಖಾತೆ ಹಂಚಿಕೆ ವಿಚಾರವಾಗಿ ದೇವೇಗೌಡರು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮವರದಿಗಾರರ ಜೊತೆಗೆ ಮಾತನಾಡಿ, ಖಾತೆ ಹಂಚಿಕೆಗೆ ಸಂಬಂಧಪಟ್ಟಂತೆ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದೆಯೇ ಹೊರತು ನಾವು ಮಾಡಿಲ್ಲ. ಇದಲ್ಲದೇ ಈ ಹಿಂದೆಯೇ ಕೂಡ ಇಂಧನ ಸಚಿವರಾಗಿ ಕೆಲಸ ಮಾಡಿದ್ದ ಡಿ.ಕೆ. ಶಿವಕುಮಾರ್ ಮತ್ತೆ ಇಂಧನ ಇಲಾಖೆಯಲ್ಲಿಯೇ ಕೆಲಸ ಮಾಡಲು ಆಸೆ ಪಟ್ಟಿದ್ದರು. ಇದಲ್ಲದೇ ಹೆಚ್.ಡಿ ರೇವಣ್ಣ ಕೂಡ ಇಂಧನ ಖಾತೆಗೆ ಆಸೆಪಟ್ಟಿದ್ದು ನಿಜ, ಆದರೆ ಡಿ ಕೆ ಶಿವಕುಮಾರ್ ಆಸೆಯಂತೆ ಇಂಧನ ಖಾತೆ ಅವರಿಗೆ ಸಿಗದಿರಲು ದೇವೇಗೌಡ ಕಾರಣರಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.
Comments