ಅಂತೂ ಇಂತೂ ‘ತೆನೆ’ ತೆಕ್ಕೆಗೆ ಒಲಿದು ಬಂದ ಈ ಹೈಟೆಕ್ ಖಾತೆ..!
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದ ಮೇಲೆ ಸಾಕಷ್ಟು ಗೊಂದಲಗಳು ತಲೆ ಎತ್ತಿದ್ದವು. ಬಹುಮತ ಪಡೆದ ಬಿಜೆಪಿ ಮೇ 19 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದರು.ಆ ವೇಳೆಯಲ್ಲಿ ಡಿಕೆಶಿ ಕಾಂಗ್ರೆಸ್ನ ಹೀರೋ ಆಗಿದ್ದರು. ಜೊತೆಗೆ ಡಿಕೆಶಿಯನನ್ನು ಟ್ರಬಲ್ ಶೂಟರ್ ಎಂದೇ ಅಂದುಕೊಂಡಿದ್ದರು.
ಬಿಜೆಪಿ ಪಕ್ಷದ ಕುದುರೆ ವ್ಯಾಪಾರದಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸುವಲ್ಲಿ ಡಿ,ಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಹಾಗಿದ್ದರೂ ಕೂಡ ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಇಂಧನ ಖಾತೆ ನೀಡಲು ಕೈ ತಪ್ಪಿದೆ. ಇಂಧನ ಖಾತೆ ಮರಳಿ ಪಡೆಯಲು ಶಿವಕುಮಾರ್ ಪಟ್ಟಂತಹ ಪ್ರಯತ್ನವು ಇದೀಗ ವ್ಯರ್ಥವಾಗಿದೆ. ಇಂಧನ ಖಾತೆ ಜೆಡಿಎಸ್ ಪಾಲಾಗಿದ್ದು, ಮುಖ್ಯಮಂತ್ರಿ ಕುಮಾರ ಸ್ವಾಮಿ ಸಹೋದರ ಎಚ್.ಡಿ ರೇವಣ್ಣ ಆ ಖಾತೆ ವಹಿಸಿಕೊಳ್ಳುವ ಎಲ್ಲಾ ಸಾಧ್ಯತೆಯಿದೆ. ಇಂಧನ ಖಾತೆಗಾಗಿ ಹಲವು ದಿನಗಳಿಂದ ರೇವಣ್ಣ ಮತ್ತು ಡಿಕೆಶಿ ಲಾಬಿಯನ್ನು ನಡೆಸುತ್ತಿದ್ದರು. ಆದರೆ ತಾವು ಯಾವುದೇ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ ಎಂದು ಡಿಕೆಶಿ ಸ್ಪಷ್ಟ ಪಡಿಸಿದ್ದಾರೆ,. ಇದೀಗ ಇಂಧನ ಖಾತೆ ಜೆಡಿಎಸ್ ಪಾಲಾಗಿದೆ. ಡಿಕೆ ಶಿವಕುಮಾರ್ ಗೃಹ ಖಾತೆ ಅಥವಾ ಜಲ ಸಂಪನ್ಮೂಲ ಖಾತೆ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ.
Comments