ಸರ್ಕಾರ ಬೀಳುತ್ತೇ ಎಂದು ಕನಸು ಕಾಣುತ್ತಿರುವ ಬಿ.ಎಸ್.ವೈ ಗೆ ಸಿಎಂ ಎಚ್’ಡಿಕೆ ಕೊಟ್ಟ ಖಡಕ್ ಆನ್ಸ್ ರ್ ಏನ್ ಗೊತ್ತಾ?
ನಮ್ಮ ಸರ್ಕಾರ ಬಂದು ಇನ್ನೂ ಸರಿಯಾಗಿ ಒಂದು ವಾರವೂ ಕೂಡ ಆಗಿಲ್ಲ. ಆಗಲೇ ಬಿ.ಎಸ್ . ಯಡಿಯೂರಪ್ಪ ಅವರು ಬಂದು ಸರ್ಕಾರ ಬೀಳುತ್ತೇ ಅಂತಾ ಕನಸನ್ನು ಕಾಣುತ್ತಿದ್ದಾರೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ವಾಗ್ದಾಳಿಯನ್ನು ನಡೆಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಬಿಜೆಪಿ ಅವರು ಎಷ್ಟು ತಿಂಗಳು ಸಮಯಾವಕಾಶ ತೆಗೆದುಕೊಂಡಿದ್ದರು. ಯಡಿಯೂರಪ್ಪನವರಿಗೆ ವಿಷಯ ಗೊತ್ತಿಲ್ಲದಿದ್ದರೆ ಅವರ ನಾಯಕರ ಬಳಿ ತಿಳಿದುಕೊಳ್ಳಲು ಹೇಳಿ, ಇನ್ನೂ ಇಲ್ಲಿ ನಮ್ಮ ಸರ್ಕಾರ ಬಂದು ಒಂದು ವಾರ ಆಗಿಲ್ಲ. ಮೊದಲು ಬಿಎಸ್ ವೈ ಎಲ್ಲವನ್ನೂ ತಿಳಿದುಕೊಂಡು ನಂತರ ಮಾತನಾಡಲಿ, ಅವರ ಬಳಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ನಮಗೆ ಯಾರಿಗೂ ಇಲ್ಲ ಎಂದಿದ್ದಾರೆ. ವಿರೋಧ ಪಕ್ಷ ನಾಯಕರಾಗಿ ರಾಜ್ಯದಲ್ಲಿರುವ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕೆ ಹೊರತು ಕೇವಲ ರಾಜಕೀಯ ಲಾಭಕ್ಕಾಗಿ ಟೀಕೆ ಮಾಡುವುದಲ್ಲ ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
Comments