ಡಿಕೆಶಿ ಒಬ್ಬಂಟಿಯಲ್ಲ.. ಕಾಂಗ್ರೆಸ್ ನಾಯಕರು ಯಾವುದಕ್ಕೂ ಜಗ್ಗುವುದಿಲ್ಲ… ಹೀಗಂತ ಸಿದ್ದರಾಮಯ್ಯ ಹೇಳಿದ್ದೇಕೆ.!?

ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐಟಿ, ಜಾರಿ ನಿರ್ದೇಶನಾಲಯದ ಮೂಲಕ ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ ಅವರ 11 ಮಂದಿ ಆಪ್ತರ ಮೇಲೆ ಸಿಬಿಐ ಕೋರ್ಟ್ ಸರ್ಚ್ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಆದಾಯ ತೆರಿಗೆ ಪ್ರಕರಣದಲ್ಲಿ ಸಿಬಿಐ 82 ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾಂಚಲಿ ದೇವಿ ಅವರು ಸರ್ಚ್ ವಾರೆಂಟ್ ಅನ್ನು ಹೊರಡಿಸಿದ್ದರು. ಬುಧವಾರ ಕೋರ್ಟ್ ನಲ್ಲಿ ಡಿ.ಕೆ. ಶಿವಕುಮಾರ್ ಹಾಜರಾಗಿದ್ದರು. 11 ಜನರಲ್ಲಿ ಡಿಕೆಶಿ ಹಾಗೂ ಡಿ.ಕೆ.ಸುರೇಶ್ ಇಬ್ಬರ ಹೆಸರೂ ಕೂಡ ಇರಲಿಲ್ಲ. ಆದ್ದರಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಡಿಕೆಶಿ ಪರ ಟ್ವೀಟ್ ಮಾಡಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯ ದ್ವೇಷ ಸಾಧನೆಗೆ ನರೇಂದ್ರ ಮೋದಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು ಖಂಡನೀಯ. ಇಂತಹ ಯಾವುದೇ ಬೆದರಿಕೆಗೆ ಕಾಂಗ್ರೆಸ್ ನಾಯಕರು ಜಗ್ಗುವುದಿಲ್ಲ. ಡಿಕೆಶಿಯು ಒಬ್ಬಂಟಿಯಲ್ಲ, ಕಾಂಗ್ರೆಸ್ ಪಕ್ಷ ಅವರ ಜೊತೆ ಯಾವಾಗಲೂ ಇರುತ್ತದೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
Comments