ಡಿಸಿಎಂ ಜಿ. ಪರಮೇಶ್ವರ್ ಹುದ್ದೆಗೆ ಎದುರಾಯ್ತ ಕಂಟಕ?
ವಾರಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಜಿ. ಪರಮೇಶ್ವರ್ ಅವರ ಹುದ್ದೆಗೆ ಕಂಟಕ ಒದಗಿ ಬರಲಿದೆಯಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.
ಇದಕ್ಕೆ ಕಾರಣ ಏನ್ ಗೊತ್ತಾ? ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಮೈಸೂರಿನ ಶೇಖರ್ ಅಯ್ಯರ್ ಎಂಬವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಎಂಬ ಹುದ್ದೆಯೇ ಇಲ್ಲ. ಹಾಗಾಗಿ ಅದನ್ನು ರದ್ದು ಮಾಡಬೇಕೆಂದು ಮನವಿಯನ್ನು ಕೂಡ ಮಾಡಿದ್ದಾರೆ. ಶೇಖರ್ ಅಯ್ಯರ್ ಅವರ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಅಂಗೀಕಾರವಾಗಿದೆ ಎಂದು ತಿಳಿದುಬಂದಿದೆ. ಆದರೆ ಹೈಕೋರ್ಟ್ ಯಾವ ರೀತಿಯ ತೀರ್ಮಾನವನ್ನು ಕೈಗೊಳ್ಳಲಿದೆ ಎಂಬುದನ್ನು ಎಲ್ಲರು ಕಾದುನೋಡಬೇಕು.
Comments