ಡಿಕೆ ಬ್ರದರ್ಸ್ ಆಪ್ತರ ಮೇಲೆ ಸಿಬಿಐ ದಾಳಿ: ಸಿಬಿಐ ಬಿಡುಗಡೆ ಮಾಡಿದ ಪ್ರೆಸ್ ನೋಟ್ನಲ್ಲೇನಿತ್ತು ?



ಮಾಜಿ ಸಚಿವ, ಕಾಂಗ್ರೆಸ್ ಶಾಸಕ, ಡಿ.ಕೆ.ಶಿವಕುಮಾರ್ ಆಪ್ತರ ಮೇಲೆ ಹಾಗೂ ನೋಟು ರದ್ದತಿ ವೇಳೆ ಅಕ್ರಮ ವಹಿವಾಟು ಪ್ರಕರಣದಲ್ಲಿ ಡಿ.ಕೆ.ಸುರೇಶ್‌ರವರ ಮಾಜಿ ಆಪ್ತ ಸಹಾಯಕರಾದ ಪದ್ಮನಾಭಯ್ಯ, ಉಪ ತಹಶೀಲ್ದಾರ್ ಆದ ಶಿವಾನಂದ್, ಗುಮಾಸ್ತರಾದ ನಂಜಪ್ಪ ಅವರ ನಿವಾಸಗಳ ಮೇಲೆ ಗುರುವಾರ ಸರ್ಚ್ ವಾರಂಟ್‌ನೊಂದಿಗೆ ಸಿಬಿಐ ಬೆಂಗಳೂರು, ಕನಕಪುರ ಮತ್ತು ರಾಮನಗರ ಸೇರಿ ಒಟ್ಟು ಐದು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಲಾಗಿದೆ.
ಈ ನಡುವೆ ನೋಟು ಅಮಾನ್ಯ ಸಂದರ್ಭದಲ್ಲಿ ಮತದಾರರಿಗೆ ಗೊತ್ತಿಲ್ಲದೇ ಅವರ ಗುರುತಿನ ಚೀಟಿ ತಯಾರಿಸುವಲ್ಲಿ ಹಾಗೂ ನೋಟು ಬದಲಾವಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸೇರಿ ಅಧಿಕಾರಿಗಳು ಶಾಮೀಲಾಗಿದ್ದರು ಎಂದು 2017, ಏಪ್ರಿಲ್ 7ರಂದು ಪ್ರಕರಣವನ್ನು ದಾಖಲಿಸಲಾಗಿತ್ತು. ಅ ಪ್ರಕರಣದ ಮುಂದುವರಿದ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಸ್ಪಷ್ಟತೆಯನ್ನು ನೀಡಿದೆ. ಈ ಸಂಬಂಧವಾಗಿ ಸಿಬಿಐ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.
Comments