ಸಚಿವ ಸಂಪುಟ ರಚನೆಗೆ ಮಹೂರ್ತ ಫಿಕ್ಸ್...ಕಾಂಗ್ರೆಸ್ 20, ಜೆಡಿಎಸ್ 10 ಸ್ಥಾನ..! ಯಾರಿಗೆ ಯಾವ ಸ್ಥಾನ..!?

ಅಂತೂ ಇಂತೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆ. ಎರಡು ಪಕ್ಷಗಳ ನಾಯಕರು ಖಾತೆ ಹಂಚಿಕೆ ಸಂಬಂಧ ಒಮ್ಮತಕ್ಕೆ ಬಂದಿದ್ದಾರೆ ,ನಾಳೆ ಸಂಜೆಯೊಳಗೆ ಅಂತಿಮ ನಿರ್ಧಾರವನ್ನು ಕೈಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾಳೆ ಸಂಜೆಯೊಳಗೆ ಸಚಿವರ ಪ್ರಮಾಣವಚನಕ್ಕೆ ಸಮಯವನ್ನು ಕೂಡ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‍ಗೆ 20 ಜೆಡಿಎಸ್‍ಗೆ 10 ಸಚಿವ ಸ್ಥಾನಗಳನ್ನು ನೀಡಲು ತೀರ್ಮಾನಿಸಲಾಗಿದ್ದು, 30 ಸಚಿವರನ್ನು ಒಂದೇ ಹಂತದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳಬೇಕೇ ಅಥವಾ ಎರಡು ಹಂತದಲ್ಲಿ ತೆಗೆದುಕೊಳ್ಳಬೇಕೇ ಎಂಬ ಬಗ್ಗೆ ಚರ್ಚೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Comments