ಪ್ರಚಾರ ಮಾಡದೆ ಫೈರಿಂಗ್ ಸ್ಟಾರ್ ಗಿಟ್ಟಿಸಿಕೊಂಡ ಮತಗಳೆಷ್ಟು ಗೊತ್ತಾ..?
ಇತ್ತೀಚಿಗಷ್ಟೆ ಮದುವೆ ಆಗಿದ್ದೀನಿ ಅಂತ ಹೇಳಿ ಎಲ್ಲರನ್ನೂ ಫೂಲ್ ಮಾಡಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಬೆಂಗಳೂರಿನ ರಾಜರಾಜಶ್ವೇರಿ ನಗರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಎಲ್ಲರಿಗೂ ತಿಳಿದೆ ಇದೆ.
ಮೇ 28ನೇ ತಾರೀಖು ನಡೆದಿದ್ದಂತಹ ರಾಜರಾಜೇಶ್ವರಿ ನಗರ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾದ ಮುನಿರತ್ನ ನಾಯ್ಡು ಅವರು ಜಯಗಳಿಸಿದ್ದಾರೆ. ಆದರೆ, ಸ್ವತಂತ್ರ ಅಭ್ಯರ್ಥಿಯಾದ ಹುಚ್ಚ ವೆಂಕಟ್ ಹೀನಾಯ ಸೋಲು ಕಂಡಿದ್ದಾರೆ. ''ನಾನು ಮನೆ-ಮನೆಗೆ ಬಂದು ಮತ ಕೇಳುವುದಿಲ್ಲ. ಯಾರು ದುಡ್ಡಿಗೆ ವೋಟು ಮಾರಿಕೊಳ್ಳವರೋ ಅವರು ನನ್ನ ಎಕ್ಕಡ ಸಮಾನ' ಎಂದು ಹೇಳಿದ್ದ ವೆಂಕಟ್ ಎಲ್ಲಿಯೂ ಪ್ರಚಾರ ಮಾಡಿರಲಿಲ್ಲ. ಹೀಗಿದ್ದರೂ ಕೂಡ 764 ಮತಗಳು ಬಂದಿರುವುದು ನಿಜಕ್ಕೂ ಆಶ್ಚರ್ಯವನ್ನು ಉಂಟು ಮಾಡಿದೆ.
Comments