ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳು..!

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದು ಬಿಜೆಪಿಯು ಐವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಬಾರಿ ಬಿಜೆಪಿ ಪಕ್ಷದಲ್ಲಿ ಕೆಲವು ಹೊಸಬರಿಗೆ ಅವಕಾಶವನ್ನು ನೀಡಲಾಗಿದೆ.
ಹೊಸದಾಗಿ ಬಿಜೆಪಿ ಸೇರ್ಪಡೆಗೊಂಡಿರುವ ಕೆ.ಪಿ.ನಂಜುಂಡಿ ಅವರಿಗೆ ಕೂಡ ಅವಕಾಶವನ್ನು ನೀಡಲಾಗಿದೆ. ಜೊತೆಗೆ ಶಿವಮೊಗ್ಗ ನಗರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದ ಎಸ್.ರುದ್ರೇಗೌಡ ಅವರಿಗೂ ಅವಕಾಶ ನೀಡಲಾಗಿದೆ. 104 ಶಾಸಕರ ಬಲವನ್ನು ಹೊಂದಿರುವ ರಾಜ್ಯದ ಅತಿ ದೊಡ್ಡ ಪಕ್ಷ ಬಿಜೆಪಿಯು ಅಭ್ಯರ್ಥಿಗಳನ್ನು ಅವಿರೋಧವಾಗಿ ಪರಿಷತ್‌ಗೆ ಆಯ್ಕೆ ಮಾಡುವ ಅವಕಾಶವನ್ನು ಹೊಂದಿದೆ. ಜೂನ್ 17ರಂದು 11 ಸದಸ್ಯರು ನಿವೃತ್ತಿಯನ್ನು ಹೊಂದಲಿದ್ದು, ಅವರ ಸ್ಥಾನವನ್ನು ಭರ್ತಿ ಮಾಡಲು ಜೂನ್ 11ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ.
ಬಿಜೆಪಿ ಅಭ್ಯರ್ಥಿಗಳು ಪಟ್ಟಿ ಈ ಕೆಳಕಂಡಂತಿದೆ
* ಎಸ್.ರುದ್ರೇಗೌಡ
* ಕೆ.ಪಿ.ನಂಜುಂಡಿ
* ಎನ್.ರವಿಕುಮಾರ್
* ತೇಜಸ್ವಿನಿ ಗೌಡ
* ರಘುನಾಥ ಮಾಲಕಪುರೆ
Comments