ಬಿಗ್ ಬ್ರೇಕಿಂಗ್: ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಡಿಕೆ ಬ್ರದರ್ಸ್...!
ಕೇಂದ್ರದ ಕೆಲವು ಬಿಜೆಪಿ ನಾಯಕರ ಷಡ್ಯಂತ್ರದಿಂದಾಗಿ 3- 4 ದಿನಗಳಲ್ಲಿ ನನ್ನ ಮೇಲೆ ಮತ್ತು ಡಿ ಕೆ ಶಿವಕುಮಾರ್ ಅವರ ಮೇಲೆ ED(ಜಾರಿ ನಿರ್ದೇಶಾಲಯ) ದಾಳಿ ನಡೆಸಲು ಸಿಬಿಐ ಸರ್ಚ್ ವಾರೆಂಟ್ ನೀಡಲಾಗಿದದೆ ಎಂಬ ಮಾಹಿತಿಗಳು ನಮಗೆ ಕೆಲವು ಮೂಲಗಳಿಂದ ಲಭ್ಯವಾಗಿದೆ ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಡಿ ಕೆ ಸುರೇಶ್ ಅವರು ಕರೆದ ತುರ್ತುಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿರುವಾಗ ಒಟ್ಟು 11 ನಾಯಕರ ಮೇಲೆ ದಾಳಿ ನಡೆಸಲು ಕುತಂತ್ರ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಆದರೂ ಇಂಥ ಬೆದರಿಕೆಗಳಿಗೆಲ್ಲ ನಾವು ಹೆದರುವುದಿಲ್ಲ, ಬಗ್ಗೋದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಶಾಸಕ ಡಿ ಕೆ ಶಿವಕುಮಾರ್, "ನಮಗೆ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳ ಬಗ್ಗೆಯೂ ಗೌರವವಿದೆ. ಆದರೆ ಅವುಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ" ಎಂದಿದ್ದಾರೆ.
Comments