ಸಿಎಂ ಮೇಲೆ ಗರಂ ಆದ ಹುಚ್ಚ ವೆಂಕಟ್, ಕಾರಣವೇನು ಗೊತ್ತಾ?

ನಿರ್ಮಾಪಕ ಹಾಗೂ ನಟ, ಹುಚ್ಚ ವೆಂಕಟ್ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಅವರ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ದರು. ಆದರೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಲು ಸಾಧ್ಯವಾಗದ ಕಾರಣ ತೀವ್ರ ಆಕ್ರೋಶಗೊಂಡಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹುಚ್ಚ ವೆಂಕಟ್, ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬಂದಿದ್ದೆ. ಆದರೆ ಅವರ ಆಪ್ತ ಸಹಾಯಕರು ಅದಕ್ಕೆ ಅವಕಾಶವನ್ನು ನೀಡಲಿಲ್ಲ ಎಂದು ದೂರಿದ್ದಾರೆ. ರೈತರ ಸಾಲ ಮನ್ನಾ ಮಾಡದಿದ್ದರೆ ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಾಲ ಮನ್ನಾ ಮಾಡಲು ಬೇಕಾದರೇ ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಲಿ, ಆದರೆ ಸಾಲಮನ್ನಾ ಮಾಡಲೇಬೇಕು ಎಂದಿದ್ದಾರೆ. ಹುಚ್ಚ ವೆಂಕಟ್, ಇನ್ನು ಮುಂದೆ ಸಿಎಂ ಮನೆಗೆ ನನ್ನ ಎಕ್ಕಡ ಕೂಡ ಕಾಲಿಡುವುದಿಲ್ಲ ಎಂದಿದ್ದಾರೆ.
Comments