ಕಾಂಗ್ರೆಸ್ ಗೆ 'ಸಿಎಂ' ಸ್ಥಾನ, ಏನಿದು ಎಚ್.ಡಿ. ದೇವೆಗೌಡರ ಹೊಸ ಬಾಂಬ್?

ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಹೊಸ ಬಾಂಬ್ ಹಾಕಿದ್ದಾರೆ.'ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದೇನೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪದವಿಗಾಗಿ ಜೆಡಿಎಸ್ ಯಾವುದೇ ರೀತಿಯಾದ ಬೇಡಿಕೆ ಇಟ್ಟಿಲ್ಲ, ಸಿಎಂ ಸ್ಥಾನವನ್ನು ಕೂಡಾ ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಸಿದ್ಧರಿದ್ದರು. ಆದರೆ,ನೀವೇ ಮುಖ್ಯಮಂತ್ರಿಯಾಗಿ ಎಂದು ಕಾಂಗ್ರೆಸ್ಸಿನ ಹೈಕಮಾಂಡ್ ಅವರೇ ದುಂಬಾಲು ಬಿದ್ದರು.ಹಾಗಾಗಿ ಫಲಿತಾಂಶ ಬಂದ ಮೇಲೆ ಯಾರು ಮೈತ್ರಿಗಾಗಿ ಮೊದಲು ಕೈ ಚಾಚಿದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಅಧಿಕಾರಕ್ಕೆ ಆಸೆ ಪಟ್ಟು ಸರ್ಕಾರ ರಚನೆಗೆ ನಾವು ಮುಂದಾಗಿಲ್ಲ ಎಂದಿದ್ದಾರೆ. ಮೈತ್ರಿ ಬಗ್ಗೆ ನಮ್ಮ ಜತೆ ಮಾತುಕತೆಗೆ ಮುಂದಾದಾಗ, ಕಾಂಗ್ರೆಸ್ಸಿನಿಂದ ಯಾರಾದರೂ ಸಿಎಂ ಆಗಲಿ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ದೇವೇಗೌಡ ಅವರು ಹೇಳಿಕೆಯನ್ನು ನೀಡಿದ್ದಾರೆ.
Comments