ಆರ್‌ ಆರ್‌ ನಗರ ವಿಧಾನಸಭಾ ಚುನಾವಣೆ: ಶೇ.41 ರಷ್ಟು ಮತದಾನ

28 May 2018 5:29 PM | Politics
516 Report

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ನಡೆಯುತ್ತಿದೆ.

ಸಂಜೆ ವೇಳೆಗೆ ಮತದಾನ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಇದ್ದು, ಸಂಜೆ ವೇಳೆ ಮತದಾನ ಮಾಡಲು ಜನ ಹೆಚ್ಚಾಗಿ ಆಗಮಿಸಿದರೆ ಚುನಾವಣಾ ಆಯೋಗದಿಂದ ಸಮಯ ವಿಸ್ತರಣೆ ಮಾಡುವ ಎಲ್ಲಾ ಸಾಧ್ಯತೆ ಇದೆ.ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ಮತದಾನದ ಪ್ರಕ್ರಿಯೆ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದ್ದು, ಮಧ್ಯಾಹ್ನ 3ಗಂಟೆಯವರೆಗೆ ಶೇ. 41ರಷ್ಟು ಮತದಾನವಾಗಿದೆ.

 

Edited By

Manjula M

Reported By

Manjula M

Comments