ನಮ್ಮ ತ್ಯಾಗ ಗುರುತಿಸಿ ಕಾಂಗ್ರೆಸ್'ಗೆ ಮತಹಾಕಿ:-ಡಿಕೆಶಿ

ಆರ್ ಆರ್ ನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಮನವಿಯನ್ನು ಮಾಡಿದರು. ಸದಾಶಿವ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಹಲವು ಕಡೆ ಪ್ರಚಾರ ಮಾಡುತ್ತೇವೆ. ನಮಗೇ ಬೆಂಬಲಿಸುವಂತೆ ಜೆಡಿಎಸ್ ನಾಯಕರಿಗೂ ಮನವಿಯನ್ನು ಮಾಡಿದ್ದೆವು.
ಅಭ್ಯರ್ಥಿಗಳನ್ನು ಹಾಕಿರುವುದರಿಂದ ಇಂದು ತೆಗೆಯುವುದು ಕಷ್ಟ ಎಂದಿದ್ದಾರೆ. ಹಾಗಾಗಿ ನಾನು ಜೆಡಿಎಸ್ ನಾಯಕರ, ಕಾರ್ಯಕರ್ತರಿಗೆ ಮನವಿಯನ್ನು ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಎಷ್ಟು ದೊಡ್ಡ ತ್ಯಾಗ ಮಾಡಿದೆ. ಇದನ್ನು ಗುರುತಿಸಿ ನಮ್ಮ ಅಭ್ಯರ್ಥಿ ಪರ ನಿಲ್ಲಬೇಕು ಎಂದು ಹೇಳಿದರು. ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಆರ್.ಆರ್.ನಗರ ಚುನಾವಣೆ ನಡೆದ ಮೇಲೆ ದೆಹಲಿಗೆ ತೆರಳಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.
Comments