ಯಡಿಯೂರಪ್ಪನವರ ವಿರುದ್ದ ದೂರು- ಕಾರಣ ಏನ್ ಗೊತ್ತಾ?
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಹೆಸರಿನಲ್ಲಿರುವ 57 ಸಾವಿರ ಕೋಟಿಯ ಜೊತೆಗೆ ಖಾಸಗಿಯವರ ಬಳಿ ಮಾಡಿರುವಂತಹ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಅದರಂತೆ ಮನ್ನಾ ಮಾಡಿ. ಮಾತು ತಪ್ಪಿದರೆ, ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿ, ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದಿದ್ದರು.
ಇದೆಲ್ಲದರ ನಡುವೆ ಕರ್ನಾಟಕ್ ಬಂದ್ ಗೆ ಕರೆ ಕೊಟ್ಟ ಯಡಿಯೂರಪ್ಪ ವಿರುದ್ದ ಪಿಸಿಸಿ ಕಾನೂನು ಘಟಕ ವಕೀಲರಾದ ಸೂರ್ಯ ಮುಕುಂದ್ ರಾಜ್ ಅವರು ಡಿಜಿಪಿಗೆ ದೂರನ್ನು ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಬಂದ್ ಅಕ್ರಮ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಕೊಟ್ಟಿದೆ. ಹೀಗಿದ್ದರು ಕೂಡ ಯಡಿಯೂರಪ್ಪ ಅವರು ಬಂದ್ ಮೂಲಕ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ ಅಂತ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
Comments