ಆರ್ ಆರ್ ನಗರ ಚುನಾವಣೆ ಹಿನ್ನೆಲೆ: ಬಂದ್ ಕರೆ ಹಿಂಪಡೆದ ಬಿಎಸ್ವೈ..!

ಸೋಮವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕರೆ ನೀಡಿದ್ದ ಬಂದ್ ಮಾಡದಿರಲು ಬಿಜೆಪಿ ಈಗಾಗಲೇ ನಿರ್ಧರಿಸಿದೆ.
ಬೆಂಗಳೂರನ್ನು ಹೊರತುಪಡಿಸಿ, ರಾಜ್ಯಾದ್ಯಂತ ರೈತರು ಕರೆ ನೀಡಿರುವಂತಹ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಪ್ರತಿಪಕ್ಷ ನಾಯಕರಾದ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜು ಪರ ಚುನಾವಣೆ ಪ್ರಚಾರ ನಡೆಸಿದ ಮಾಜಿ ಸಿಎಂ ಬಿಎಸ್ ವೈ, ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರೈತರು ಬಂದ್ ನಡೆಸಲು ನಿರ್ಧರಿಸಿದ್ದಾರೆ. ಅವರಿಗೆ ಪಕ್ಷದ ಬೆಂಬಲವಿದೆ ಎಂದಷ್ಟೇ ಹೇಳಿದ್ದೆ, ಬಿಜೆಪಿಯೇ ಬಂದ್ ಆಚರಿಸುತ್ತೆ ಎಂದು ಹೇಳಿರಲಿಲ್ಲ ಎಂದು ಬಿಎಸ್ ವೈ ತಿಳಿಸಿದ್ದಾರೆ.
Comments