ಮೈತ್ರಿ ಸರ್ಕಾರದ ಪಾಳಯದಲ್ಲಿ ಖಾತೆಗಾಗಿ ಶುರುವಾದ ಖ್ಯಾತೆ!

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪಾಳಯದಲ್ಲಿ ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ.
ಇದರ ನಡುವೆ ಸಮ್ಮಿಶ್ರ ಸರ್ಕಾರದಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ತಮಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೀಡಬೇಕು ಅಂತ ಬೇಡಿಕೆಯನ್ನು ಇಟ್ಟಿದೆ ಎನ್ನಲಾಗಿದೆ, ಹೀಗಾಗಿ ಖಾತೆ ಹಂಚಿಕೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಲ್ಲಿ ಖಾತೆಗಾಗಿ ವೈಮನಸ್ಸು ಶುರುವಾಗಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು, ಸಮಾಜಕಲ್ಯಾಣ ಇಲಾಖೆ, ಲೋಕಪಯೋಗಿ, ಖಾತೆಗಳನ್ನು ನಮಗೆ ಕೊಡುವಂತೆ ಪಟ್ಟಿಯನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಕಾಂಗ್ರೆಸ್ ವರಿಷ್ಠರು ಕಳುಹಿಸಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.ಇದೆಲ್ಲಾದರ ನಡುವೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಭಿನ್ನಭಿಪ್ರಾಯಗಳು ಶುರುವಾಗುತ್ತಿವೆ ಎನ್ನಲಾಗುತ್ತಿದೆ.
Comments