ಜಯನಗರ ಚುನಾವಣೆ ಹಿನ್ನಲೆ-ಶತಾಯ ಗತಾಯ ಬಿಜೆಪಿ ಗೆಲ್ಲಲೇ ಬೇಕು?

26 May 2018 9:26 AM | Politics
452 Report

ಇತ್ತಿಚೀಗಷ್ಟೆ ಶಾಸಕರಾದ ಬಿ.ಎನ್ . ವಿಜಯ್ ಕುಮಾರ್ ಅವರು ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್ .ಪ್ರಹ್ಲಾದ್ ಅವರು ನಾಮಪತ್ರ ಸಲ್ಲಿಸಿದ್ದಾರೆ.  

ಕೇಂದ್ರ ಸಚಿವರಾದ ಅನಂತ್ ಕುಮಾರ್ ಸೇರಿದಂತೆ ಇತರೆ ಬಿಜೆಪಿಯ ಮುಖಂಡರ ಜೊತೆ ತೆರಳಿದ ಪ್ರಹ್ಲಾದ್ ಚುನಾವಣಾ ಅಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದರು. ಜಯನಗರದಲ್ಲಿ ಏನೆ ಆದರೂ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಹಠಕ್ಕೆ ಬಿದ್ದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಮಾಜಿ ಡಿಸಿಎಂ ಆರ್. ಅಶೋಕ್ ಶುಕ್ರವಾರ ಬಿಬಿಎಂಪಿ ಸದಸ್ಯರ ಸಭೆಯನ್ನು ಕೂಡ ನಡೆಸಿದರು.

 

Edited By

Manjula M

Reported By

Manjula M

Comments