ಬಿಗ್ ಬ್ರೇಕಿಂಗ್ : ಸದನದಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಎಚ್’ಡಿಕೆ ಹೇಳಿದ್ದೇನು?

ರೈತರ ಸಾಲ ಮನ್ನಾ ಮಾಡುವುದನ್ನು ನಾನು ಯಾರಿಂದನೂ ಕಲಿಯಬೇಕಿಲ್ಲ. ಈ ಹಿಂದೆಯೂ ಕೂಡ ಸಾಲ ಮನ್ನಾ ಮಾಡಿದ್ದೇನೆ.
ನನ್ನ ಅವಧಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ನಾನು ಬಿಡುವುದಿಲ್ಲ, ಬಹುಮತ ಬಂದಿಲ್ಲ ಸಾಲ ಮನ್ನಾ ಮಾಡುವುದಿಲ್ಲ ಎಂದು ತಮಾಷೆ ಮಾಡಿದ್ದೆ ಅಷ್ಟೆ ಆದರೆ, ರೈತರ ಜೀವನದ ಜೊತೆ ಎಂದೂ ಚೆಲ್ಲಾಟ ಆಡುವುದಿಲ್ಲ ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಅವರು ತಿಳಿಸಿದ್ದಾರೆ. ಅವರು ಇಂದು ಸದನದಲ್ಲಿ ವಿಶ್ವಾಸ ಮತದ ಪ್ರಸ್ತಾವನೆಯನ್ನು ಮಂಡಿಸಿ ಮಾತನಾಡಿದರು ಇದೇ ವೇಳೆ ಒಬ್ಬಂಟಿಯಾಗಿ ನಾನು ಯಾವುದೇ ನಿರ್ಧಾರವನ್ನು ಘೋಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರ ಸಹಕಾರವನ್ನು ಕೂಡ ನಾನು ಪಡೆಯಬೇಕಾಗಿದೆ. ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆಯೂ ಇದೆ ಅಂತ ಹೇಳಿದರು.
Comments