ಬಿಗ್ ಬ್ರೇಕಿಂಗ್ : ಸ್ಪೀಕರ್ ಆಯ್ಕೆ ಕುರಿತು ಇದೀಗ ಬಂದ ಸ್ಫೋಟಕ ಮಾಹಿತಿ ಏನ್ ಗೊತ್ತಾ?

25 May 2018 12:26 PM | Politics
4359 Report

ಇಂದೂ ಸ್ಪೀಕರ್ ಆಯ್ಕೆಯ ಕಣದಲ್ಲಿದ್ದ ಸುರೇಶ್ ಕುಮಾರ್ ತಮ್ಮ ನಾಮಪತ್ರವನ್ನು ಪಾಪಸ್ ಪಡೆದಿದ್ದಾರೆ.

ಇನ್ನೇನು ಸ್ಪೀಕರ್ ಆಯ್ಕೆ ಶುರು ಆಗುವ ಹಂತದಲ್ಲಿತ್ತು, ಆದರೆ ಇದೀಗ ಸುರೇಶ್ ಕುಮಾರ್ ನಾಮಪತ್ರವನ್ನು ಹಿಂಪಡೆದಿದ್ದಾರೆ.ಇಂದು  ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಸಾಬೀತು ಪಡಿಸುವ ಮೊದಲೆ ಈ ಸ್ಪೀಕರ್ ಆಯ್ಕೆ ನಡೆಯುವುದಾಗಿ ತಿಳಿಸಿದ್ದರು. ಸ್ಪೀಕರ್ ಹುದ್ದೆಗೆ ನಿನ್ನೆ ತಾನೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಸುರೇಶ್ ಕುಮಾರ್ ಕಣದಿಂದ ಹಿಂದೆ ಸರಿದ್ದಾರೆ. ಬಹುಮತ ಸಾಬೀತುಪಡಿಸುವುದು ಕಷ್ಟಕರ ಎನ್ನುವುದು ತಿಳಿದ ಬಳಿಕ ಸುರೇಶ್ ಕುಮಾರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ನ ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

Edited By

Manjula M

Reported By

Manjula M

Comments