ಒಂದ್ಸಾರಿ ಆದ್ರೂ ಪ್ರಧಾನ ಮಂತ್ರಿಯಾಗ್ತಾರಂತೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್..!

ನಕಲಿ ವೋಟರ್ ಐಡಿ ವಿಷಯವಾಗಿ ಸಂಬಂಧಿಸಿದಂತೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇನ್ನೂ ಬಾಕಿ ಇದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಮೇ 28 ಸೋಮವಾರದಂದು ನಡೆಯುವುದರಿಂದ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ಹುಚ್ಚ ವೆಂಕಟ್ ನನಗೆ ಮತ ಹಾಕಿ ಗೆಲ್ಲಿಸಿ, ನಿಮಗೆ ಬೇಕಾದ ಕೆಲಸಗಳನ್ನು ನಾನು ಮಾಡಿಕೊಡುತ್ತೇನೆ ಎಂದಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಮನೆ ಮನೆಗೆ ಬಂದು ಮತ ಕೇಳಲ್ಲ. ದುಡ್ಡು ಕೊಡುವುದು, ಸೀರೆ ಕೊಡುವುದು, ಕುಕ್ಕರ್ ಕೊಟ್ಟು ಮತ ಹಾಕಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ. ಆರ್.ಆರ್. ನಗರ ಕ್ಷೇತ್ರದ ಜನರು ನನ್ನ ಕೈ ಬಿಡಲ್ಲ ಅನ್ನೋ ನಂಬಿಕೆ ನನಗೆ ಇದೆ. ಇಲ್ಲಿ ಸೋತರೆ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ನೂತನ ಸಿಎಂ ಕುಮಾರಸ್ವಾಮಿಗೆ ಹುಚ್ಚ ವೆಂಕಟ್ ಶುಭಾಷಯ ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹುಚ್ಚ ವೆಂಕಟ್ ಪಕ್ಷ ಅಸ್ತಿತ್ವಕ್ಕೆ ಬರಲಿದ್ದು, ಒಮ್ಮೆಯಾದರೂ ನಾನು ಪ್ರಧಾನಿಯಾಗುತ್ತೇನೆ ಇದು ನೂರಷ್ಟು ಸತ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
Comments