ನಾಳೆ ಕಾಂಗ್ರೆಸ್-ಜೆಡಿಎಸ್ ಉಭಯ ಪಕ್ಷಗಳ ವಿಶ್ವಾಸಮತಯಾಚನೆ

ನೆನ್ನೆ ಅಷ್ಟೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಪ್ರಮಾಣವಚನವನ್ನು ಸ್ವೀಕರಿಸಿದರು. ಅದೇ ಬೆನ್ನಲೆ ಅಂದರೆ ನಾಳೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟದ ವಿಶ್ವಾಸಮತಯಾಚನೆ ನಾಳೆ ನಡೆಯಲಿದ್ದು, ಇಂದು ಕಾಂಗ್ರೆಸ್-ಜೆಡಿಎಸ್ ಉಭಯ ಪಕ್ಷಗಳ ಸಭೆ ನಡೆಯಲಿದೆ.
ಇದೇ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ. ಜೆಡಿಎಸ್ ಶಾಸಕರು ಇದ್ದ ರೆಸಾರ್ಟ್ ಗೆ ಕುಮಾರಸ್ವಾಮಿ ತೆರಳಿದ್ದು ಅಲ್ಲೇ ರಾತ್ರಿಯನ್ನು ಕೂಡ ಕಳೆದಿದ್ದಾರೆ.ಇನ್ನು ಕಾಂಗ್ರೆಸ್ ಶಾಸಕರಿಗೆ ಸೋನಿಯಾ ಮತ್ತು ರಾಹುಲ್ ಗಾಂಧಿ ಖುದ್ಧು ಭೇಟಿ ಮಾಡಿ ನಮ್ಮೊಂದಿಗೆ ಇರಿ ಎಂದು ಹೇಳಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖ ನಾಯಕರು ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
Comments