ಸಾಲಮನ್ನಾ ಬಗ್ಗೆ ಯಾವುದೇ ಊಹಾಪೋಹ ನಂಬಬೇಡಿ: ಹೆಚ್ಡಿಕೆ

23 May 2018 3:33 PM | Politics
601 Report

ಈಗಾಗಲೇ ಸಾಲ ಮನ್ನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇವೆ. ಸಾಲಮನ್ನಾ ಬಗ್ಗೆ ಯಾವುದೇ ಊಹಾಪೋಹದ ಮಾತುಗಳನ್ನು ರೈತರು ನಂಬಬೇಡಿ, ಇನ್ನು ಕೆಲವೇ ದಿನಗಳಲ್ಲಿ ಈ ವಿಷಯದ ಬಗ್ಗೆ ಧನಾತ್ಮಕ ನಿರ್ಣಯ ಕೈಗೊಳ್ಳುತ್ತೇವೆ ಎಂದು ನಿಯೋಜಿತ ಮುಖ್ಯಮಂತ್ರಿಯಾದ  ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನ ಯೋಜನೆ ಬೇರೆ ಇದೆ, ಆರ್ಥಿಕ ತಜ್ಞರ ಚಿಂತನೆ ಬೇರೆ ಇದೆ, ಹಾಗಾಗಿ ಚರ್ಚಿಸಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಹೆಚ್ಡಿಕೆ ತಿಳಿಸಿದರು.ರಾಜ್ಯದ ರೈತರ ಹಿತ ಕಾಪಾಡುತ್ತೇನೆ ಎಂದು ಭರವಸೆಯನ್ನು ನೀಡಿದ ಅವರು, ಇಸ್ರೇಲ್‌ಗಿಂತಲೂ ಉತ್ತಮ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ತರುವುದಾಗಿ ಅವರು ತಿಳಿಸಿದರು.

Edited By

Manjula M

Reported By

Manjula M

Comments