ನಿಯೋಜಿತ ಸಿಎಂ-ಡಿಸಿಎಂಗೆ ಶುಭಾಷಯ ಕೋರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

23 May 2018 2:43 PM | Politics
466 Report

ರಾಜಕೀಯನೇ ಹಾಗೆ ದೊಂಬರಾಟ ಇದ್ದ ಹಾಗೆ, ನಿನ್ನೆ ಶತ್ರುಗಳಾದವರು ಇಂದು ಗೆಳೆಯರಾಗಿರುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಎಂದರೆ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿ.

ಎಣ್ಣೆ-ಸೀಗೆಕಾಯಿಯಂತಿದ್ದ  ಜೆಡಿಎಸ್-ಕಾಂಗ್ರೆಸ್ ನಾಯಕರು ಇಂದು ಒಂದಾಗಿದ್ದಾರೆ. ಕುಮಾರಸ್ವಾಮಿ ಎಂದರೆ ಕೆಂಡಕಾರುತ್ತಿದ್ದ ಸಿದ್ದರಾಮಯ್ಯ ಕುಮಾರಸ್ವಾಮಿಯವರಿಗೆ ಎಲ್ಲ ಬೇಸರ ಮರೆತು ಶುಭಹಾರೈಸಿದ್ದಾರೆ. ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಟ್ವಿಟ್ಟರ್ ಮೂಲಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

 

Edited By

Manjula M

Reported By

Manjula M

Comments