ಅಂತೂ ಇಂತೂ ಸದನಕ್ಕೆ ಹಾಜರಾದ ಆನಂದ್‍ಸಿಂಗ್ ಮತ್ತು ಪ್ರತಾಪ್‍ಗೌಡ..!

ರಾಜ್ಯ ಚುನಾವಣಾ ಫಲಿತಾಂಶ ಹಿನ್ನಲೆಯಲ್ಲಿ ಫಲಿತಾಂಶ ಪ್ರಕಟವಾದ ದಿನದಿಂದ ಕಾಂಗ್ರೆಸ್‍ಗೆ ಕೈ ಕೊಟ್ಟಿದ್ದ ಮಸ್ಕಿ ಶಾಸಕ ಪ್ರತಾಪ್‍ಗೌಡ ಹಾಗೂ ವಿಜಯನಗರ ಶಾಸಕರಾದ ಆನಂದ್‍ಸಿಂಗ್ ಅವರು ಕೊನೆಗೂ ಸದನಕ್ಕೆ ಹಾಜರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ದಿನಾಂಕವನ್ನು ನಿಗದಿ ಮಾಡಿದ ಮೇಲೆ ಈ ಇಬ್ಬರು ಶಾಸಕರು ನಾಪತ್ತೆಯಾಗಿದ್ದರು.
ಯಾರ ಸಂಪರ್ಕಕ್ಕೂ ಕೂಡ ಸಿಕ್ಕಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸಲು ಮಂಡಿಸಿತಾದರೂ ರಾಜ್ಯಪಾಲರು ಇದಕ್ಕೆ ಯಾವುದೇ ಅವಕಾಶ ನೀಡಿರಲಿಲ್ಲ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಒಟ್ಟಾಗಿ ಈಗಲ್‍ಟನ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಇಬ್ಬರು ಶಾಸಕರು ಪೊಲೀಸ್ ರಕ್ಷಣೆ ಕೋರಿದ್ದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸುನೀಲ್‍ಕುಮಾರ್, ಡಿಜಿ ನೀಲಮಣಿ ಎನ್.ರಾಜು ಅವರೇ ತೆರಳಿ ಖುದ್ದಾಗಿ ರಕ್ಷಣೆಯನ್ನು ನೀಡಿದ್ದರು. ನಂತರ ಮಧ್ಯಾಹ್ನ ಇಬ್ಬರು ಶಾಸಕರು ಪೊಲೀಸ್ ರಕ್ಷಣೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಕೂಡಲೇ ವಿಧಾನಸೌಧದ ಪ್ರವೇಶ ದ್ವಾರದಲ್ಲೇ ಡಿ.ಕೆ.ಶಿವಕುಮಾರ್ ಅವರು ಮೊದಲು ಪ್ರತಾಪ್‍ಗೌಡ ಅವರನ್ನು ಕರೆದೊಯ್ದು ಒಳಗೆ ಕೂರಿಸಿದರು. ನಂತರ ಆನಂದ್‍ಸಿಂಗ್ ಅವರನ್ನು ಒಳಗೆ ಕರೆದೊಯ್ದರು. ಈ ಇಬ್ಬರು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಅಲ್ಲಿಯೇ ಅವರಿಗೆ ವಿಪ್ ನೀಡಲಾಗಿದೆ.
Comments