ಎಕ್ಸ್ ಕ್ಯ್ಲೂಸಿವ್ : ‘ಕೈ’ ಶಾಸಕನಿಗೆ ಬಿ.ಎಸ್.ವೈ ಗಾಳ; ಸ್ಪೋಟಕ ಆಡಿಯೋ ಕ್ಲಿಪ್ಪಿಂಗ್ ರಿಲೀಸ್



ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾಕಷ್ಟು ಗೊಂದಲಗಳ ನಡುವೆಯೂ ನೂತನ ಮುಖ್ಯಮಂತ್ರಿ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸಾಬೀತು ಮಾಡಬೇಕಿದೆ. ಇದೀಗ ಬಿ.ಎಸ್.ಯಡಿಯೂರಪ್ಪನವರೇ ಕುದುರೆ ವ್ಯಾಪಾರಕ್ಕೆ ಕೈ ಹಾಕಿದ್ದಾರೆ ಎಂಬ ಸ್ಪೋಟಕ ಮಾಹಿತಿ ಒಂದು ಹೊರಬಿದ್ದಿದೆ.
ಹೌದು.., ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಗೆ ಖುದ್ದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿ ಮಂತ್ರಿ ಸ್ಥಾನವನ್ನು ಕೊಡುವುದ್ದಾಗಿ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನವರು ಇದರ ಆಡಿಯೋ ಬಿಡುಗಡೆ ಮಾಡಿದ್ದಾರೆ.
Comments