ಬಿಗ್ ಬ್ರೇಕಿಂಗ್ : ಬಿ.ಎಸ್.ವೈ ಆಪ್ತರ ಆಪರೇಶನ್ ಕಮಲವನ್ನ ಬಯಲು ಮಾಡಿದ 'ಕೈ' ಶಾಸಕ; ಮತ್ತೊಂದು ಆಡಿಯೋ ರಿಲೀಸ್



ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾಕಷ್ಟು ಗೊಂದಲಗಳ ನಡುವೆಯೂ ನೂತನ ಮುಖ್ಯಮಂತ್ರಿ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸಾಬೀತು ಮಾಡಬೇಕಿದೆ. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದೀಗ ಆಪರೇಷನ್ ಕಮಲದ ಮತ್ತೊಂದು ಆಡಿಯೋ ಬಿಡುಗಡೆ ಮಾಡಿದೆ.
ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಇಂದು ವಿಧಾನಸೌಧದಲ್ಲಿ ಈ ಆಡಿಯೋ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿದ ಬಿಜೆಪಿ ನಾಯಕರು, ಸಚಿವ ಸ್ಥಾನ, ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಚಿವ ಸ್ಥಾನವನ್ನು ನೀಡಿ 5 ಕೋಟಿ ಹಣ ನೀಡುವುದು, ಸಚಿವ ಸ್ಥಾನ ಬೇಡವೆಂದರೆ 15 ಕೋಟಿ ಹಣ ನೀಡುವುದಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರ ಪತ್ನಿ ಜೊತೆ ಮಾತುಕತೆ ನಡೆಸಿದ ಆಡಿಯೋ ಇದಾಗಿದೆ. ಆದರೆ, ಯಾವ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬದನ್ನು ಉಗ್ರಪ್ಪ ಅವರು ಬಹಿರಂಗ ಪಡಿಸಿಲ್ಲ.
Comments