ಟೈಮ್ಸ್ ಸ್ಟಾಟ್ಸ್ ನೌ – 'ನಂಬರ್ ಗೇಮ್'ಗೆ ಕ್ಷಣಗಣನೆ, ವಿಶ್ವಾಸಮತ ಉಳಿಸಿಕೊಳ್ಳುವರೆ ಬಿಎಸ್ ವೈ..!?

ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಸಾಕಷ್ಟು ಗೊಂದಲುಗಳು ತಲೆ ಎತ್ತಿವೆ. ಈಗಾಗಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಿ.ಎಸ್ ವೈ ಸಾಕಷ್ಟು ಗೊಂದಲಲ್ಲಿದ್ದಾರೆ.ಇಂದು ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಇಂದು ಸಂಜೆ 11 ಗಂಟೆ ವೇಳೆಗೆ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಹಂಗಾಮಿ ಸ್ಪೀಕರ್ ಬೋಪಯ್ಯ ಅವರ ನೇತೃತ್ವದಲ್ಲಿ ಬಹುಮತ ಸಾಬೀತು ಪ್ರಕ್ರಿಯೆಯು ನಡೆಯಲಿದೆ. ಖಾಸಗಿ ಹೋಟೆಲ್ ನಲ್ಲಿ ಭಾರಿ ಬಿಗಿ ಭದ್ರತೆಯೊಂದಿಗೆ ಸದನಕ್ಕೆ ಹಾಜರಾಗುವ ತಯಾರಿಯಲ್ಲಿದ್ದಾರೆ. ವಿಶ್ವಾಸಮತ ಪೂರ್ಣವಾಗಿ ನಂಬರ್ ಗೇಮ್ ಮೇಲೆ ನಡೆಯಲಿದೆ. ಆಪರೇಷನ್ ಕಮಲ ಭೀತಿಯಲ್ಲಿ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿಗೆ ಈಗಾಗಲೇ ಹಿಂದಿರುಗಿದ್ದಾರೆ. ಬಿಜೆಪಿ 104 ಸದಸ್ಯ ಬಲ ಹೊಂದಿರುದ್ದು, ಬಹುಮತ ಸಾಬೀತಿಗೆ ಯಾವ ರೀತಿಯಾಗಿ ಕಸರತ್ತು ನಡೆಸಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲವನ್ನು ಕೆರಳಿಸಿದೆ. ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹಕ್ಕನ್ನು ಪ್ರತಿಪಾದಿಸಲಿದೆ. ಏನಾದರೂ ಮಾಡಿ ಬಹುಮತ ಸಾಬೀತು ಪಡಿಸಲೇಬೇಕೆಂಬ ಬಿಜೆಪಿ ಪ್ರಯತ್ನ ಮುಂದುವರಿಸಿದೆ. ಶಾಸಕರನ್ನು ಆಪರೇಷನ್ ಕಮಲ ಭೀತಿಗೆ ಒಳಗಾಗದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಕಾಯ್ದುಕೊಂಡಿದ್ದಾರೆ. ಇಂದು ಸಂಜೆ 4 ಗಂಟೆಗೆ ವರೆಗೆ ರಾಜಕೀಯ ಚಟುವಟಿಕೆಗಳು ಮುಂದುವರಿಯಲಿವೆ.
Comments